ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಕ್ಕೆ ಕಾರಣ ಕೇಂದ್ರದ ನಿರ್ಲಕ್ಷ್ಯ – ಮಮತಾ ಬ್ಯಾನರ್ಜಿ
ಉಕ್ರೇನ್ ನಲ್ಲಿ ನಡೆದ ಶೆಲ್ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿಯ ಸಾವನ್ನಪ್ಪಿದ್ದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ‘ಸರ್ಕಾರದ ನಿರ್ಲಕ್ಷ್ಯ’ ಎಂದು ಕರೆದಿದ್ದಾರೆ.
“ಇದು ನಿರ್ಲಕ್ಷ್ಯ, ಅಪರಾಧ, ಇದೆಲ್ಲವನ್ನೂ ಮಾಡಲು ಒಂದೆರಡು ಫೋನ್ ಕರೆಗಳು ಬೇಕಾಗುತ್ತದೆ ಅಷ್ಟೇ ರಾಜಕೀಯ ರ್ಯಾಲಿಗಳಿಗಿಂತ ಎಷ್ಟು ಸಮಯ ತೆಗೆದುಕೊಳ್ಳುತ್ತದೆ” ಎಂದು ಮಮತ ಕೇಳಿದರು.
ಮಮತಾ ಬ್ಯಾನರ್ಜಿ, “ನಾನು ಉಕ್ರೇನ್ ವಿಷಯದಲ್ಲಿ ಪ್ರಧಾನಿ ಮೋದಿಯನ್ನು ಬೆಂಬಲಿಸಿದ್ದೇನೆ. ಆದರೆ ಮೂರು ತಿಂಗಳ ಹಿಂದೆ ಪ್ರಧಾನಿಗೆ ಅಂತಹ ವಿಷಯ ಬಗ್ಗೆ ತಿಳಿದಿದ್ದರೆ… ನನಗೆ ಒಂದು ಪ್ರಶ್ನೆ ಇದೆ. ಈ ಭಾರತೀಯ ವಿದ್ಯಾರ್ಥಿಗಳನ್ನು ಏಕೆ ವಾಪಸ್ ಕರೆತರಲಿಲ್ಲ? ಅವರನ್ನು ಮರಳಿ ಕರೆತರುವುದು ಯಾವುದೇ ಸರ್ಕಾರದ ಜವಾಬ್ದಾರಿಯಾಗಿದೆ. ” ಎಂದು ಮಮತ ಹೇಳಿದ್ದರು.
ಈ ಹಿಂದೆ, ರಷ್ಯಾದ ಆಕ್ರಮಣದ ನಂತರ ಉಕ್ರೇನ್‌ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಬೆಂಬಲವನ್ನು ನೀಡಿದ್ದರು.
“ಬಾಹ್ಯ ವ್ಯವಹಾರಗಳ ವಿಷಯದಲ್ಲಿ ನಾನು ಸರ್ಕಾರವನ್ನು ಟೀಕಿಸಲು ಬಯಸುವುದಿಲ್ಲ. ನಾವಿಬ್ಬರೂ ಒಂದಾಗಿದ್ದೇವೆ. ಆದರೆ ಅವರು ರಾಜಕೀಯದಲ್ಲಿ ನಿರತರಾಗಿದ್ದರಿಂದ ಏನೂ ಆಗಲಿಲ್ಲ,” ಎಂದು ಅವರು ಆರೋಪಿಸಿದರು.