T20 World Cup 2022 | ಸ್ಟಾರ್ ಬೌಲರ್ ಗೆ ನೋ ಚಾನ್ಸ್…
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ವರ್ಷದ ಟಿ 20 ವಿಶ್ವಕಪ್ ಗಾಗಿ ಎಲ್ಲಾ ತಂಡಗಳು ಈಗಾಗಲೇ ತಯಾರಿ ಆರಂಭಿಸಿವೆ. ಅದರಂತೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಕೂಡ ಮೆಗಾ ಟೂರ್ನಿಗೆ ಸಿದ್ಧವಾಗುತ್ತಿದೆ. ಈ ಮಧ್ಯೆ ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ, ಟಿ 20 ವಿಶ್ವಕಪ್ ಗೆ ಭಾರತದ ತನ್ನ ತಂಡವನ್ನು ಪ್ರಕಟಿಸಿದ್ದಾರೆ.
ಚೋಪ್ರಾ ತನ್ನ ತಂಡದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ, ರಾಹುಲ್, ಒನ್ ಡೌನ್ ಬ್ಯಾಟರ್ ಆಗಿ ವಿರಾಟ್ ಕೊಹ್ಲಿ, ಮಿಡಲ್ ಆರ್ಡರ್ ನಲ್ಲಿ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ , ಇಶಾನ್ ಇದ್ದಾರೆ.
ವಿಕೆಟ್ ಕೀಪರ್ ಆಗಿ ರಿಷಬ್ ಇದ್ದು, ಆಲ್ ರೌಂಡರ್ ಕೋಟಾದಲ್ಲಿ ರವೀಂದ್ರ ಜಡೇಜಾ, ವೆಂಕಟೇಶ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ಸ್ಥಾನ ನೀಡಲಾಗಿದೆ.
ಬೌಲರ್ಗಳ ಕೋಟಾದಲ್ಲಿ, ಬೂಮ್ರಾ, ಭುವನೇಶ್ವರ್ ಕುಮಾರ್ , ದೀಪಕ್ ಚಹಾರ್ ಇದ್ದಾರೆ. ಮೂರನೇ ವೇಗಿಯಾಗಿ ಕೃಷ್ಣ, ಮೊಹಮ್ಮದ್ ಸಿರಾಜ್ ಅಥವಾ ಅವೇಶ್ ಖಾನ್ ಅವರಲ್ಲಿ ಒಬ್ಬರು ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂದಿದ್ದಾರೆ ಚೋಪ್ರಾ.
ಅದೇ ರೀತಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಮೆಗಾ ಈವೆಂಟ್ಗೆ ಮೊಹಮ್ಮದ್ ಶಮಿ, ಟಿ ನಟರಾಜನ್ ಅಥವಾ ಖಲೀಲ್ ಅಹ್ಮದ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಚೋಪ್ರಾ ಹೇಳಿದ್ದಾರೆ.
ಆದ್ರೆ ಇತ್ತೀಚೆಗೆ ಮೂರು ಮಾದರಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಶರ್ದೂಲ್ ಠಾಕೂರ್ ಗೆ ಚೋಪ್ರಾ ತಂಡಲ್ಲಿ ಸ್ಥಾನ ನೀಡಿಲ್ಲ.t20-world-cup-2022- aakash-chopra-india-s-squad