ಉಕ್ರೇನ್ ಬಿಕ್ಕಟ್ಟು – 227 ನಾಗರೀಕರ ಸಾವು 525 ಮಂದಿ ಗಾಯ
ಒಂದು ವಾರದ ಹಿಂದೆ ಪ್ರಾರಂಭವಾದ ರಷ್ಯಾದ ಮಿಲಿಟರಿ ಆಕ್ರಮಣದ ಹಿನ್ನೆಲೆಯಲ್ಲಿ ಉಕ್ರೇನ್‌ನ 227 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 525 ಜನರು ಗಾಯಗೊಂಡಿದ್ದಾರೆ ಎಂದು ಯುಎನ್ ಮಾನವ ಹಕ್ಕುಗಳ ಕಚೇರಿಯು ಹೇಳಿದೆ.
2014 ರಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿಗಳು ಮತ್ತು ಉಕ್ರೇನಿಯನ್ ಪಡೆಗಳ ನಡುವೆ ಪೂರ್ವ ಉಕ್ರೇನ್‌ನಲ್ಲಿ ನಡೆದ ಯುದ್ಧದಿಂದ 136 ಮಂದಿ ಸತ್ತರು ಮತ್ತು 577 ಮಂದಿ ಗಾಯಗೊಂಡರು – ಎಂದು ಯುಎನ್ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿ ಹೇಳಿದೆ.
ಮಾನವ ಹಕ್ಕುಗಳ ಕಚೇರಿ ಬುಧವಾರ ನೀಡಿದ ಹೇಳಿಕೆಯಲ್ಲಿ “ನಿಜವಾದ ಅಂಕಿಅಂಶಗಳು ಗಣನೀಯವಾಗಿ ಹೆಚ್ಚಿವೆ, ವಿಶೇಷವಾಗಿ ಸರ್ಕಾರಿ ನಿಯಂತ್ರಿತ ಪ್ರದೇಶದಲ್ಲಿ ತೀವ್ರವಾದ ಹಗೆತನ ನಡೆಯುತ್ತಿರುವ ಕೆಲವು ಸ್ಥಳಗಳಿಂದ ಮಾಹಿತಿಯ ಸ್ವೀಕೃತಿಯು ವಿಳಂಬವಾಗಿದೆ ಮತ್ತು ಅನೇಕ ವರದಿಗಳು ಇನ್ನೂ ದೃಢೀಕರಣ ಬಾಕಿ ಇದೆ”. ಎಂದಿದೆ..
ಕ್ಷಿಪಣಿ ಮತ್ತು ಮಲ್ಟಿ ಲಾಂಚ್ ರಾಕೆಟ್ ವ್ಯವಸ್ಥೆಗಳಿಂದ ಶೆಲ್ ದಾಳಿ ಮತ್ತು ವೈಮಾನಿಕ ದಾಳಿ ಸೇರಿದಂತೆ ಸ್ಫೋಟಕ ಶಸ್ತ್ರಾಸ್ತ್ರಗಳ ಬಳಕೆಯಿಂದ ಹೆಚ್ಚಿನ ಸಾವುನೋವುಗಳು ಸಂಭವಿಸಿವೆ ಎಂದು ಮಾನವ ಹಕ್ಕುಗಳ ಕಚೇರಿ ತಿಳಿಸಿದೆ.








