100ನೇ Test : 8000 ರನ್ಸ್ ಪೂರೈಸಿದ Kohli
ವೃತ್ತಿ ಜೀವನದ ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಶತಕದ ಪಂದ್ಯದಲ್ಲಿ ಮಹತ್ವದ ಮೈಲುಗಲ್ಲು ತಲುಪಿದ್ದಾರೆ. ಈ ಪಂದ್ಯದಲ್ಲಿ 38 ರನ್ ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 8000 ರನ್ ಸೇರಿಸಿ ಸಾಧನೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಪಂದ್ಯದ 39ನೇ ಓವರ್ ನಲ್ಲಿ 8000 ಸಾವಿರ ರನ್ ಸಾಧನೆ ಮಾಡಿದ್ದಾರೆ. ವಿಶ್ವಾ ಫರ್ನಾಂಡೋ ಎಸೆದ ಎರಡನೇ ಎಸೆತವನ್ನು ಡೀಪ್ ಪಾಯಿಂಟ್ ಗೆ ತಳ್ಳಿ ಒಂದು ರನ್ ಕದಿಯುತ್ತಿದ್ದಂತೆ ಅಭಿಮಾನಿಗಳು ಹಾಗೂ ಡ್ರೆಸಿಂಗ್ ರೂಮ್ ನಲ್ಲಿ ಕುಳಿತಿದ್ದ ಸಹ ಆಟಗಾರರು ಚೇಸಿಂಗ್ ಸ್ಟಾರ್ ಸಾಧನೆಗೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು.
ಈಗಾಗಲೇ ಸುನಿಲ್ ಗವಾಸ್ಕರ್ (Sunil Gavaskar), ಸಚಿನ್ ತೆಂಡುಲ್ಕರ್(Sachin Tendulkar), ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid), ವಿರೇಂದ್ರ ಸೆಹ್ವಾಗ್ (Virender Sehwag) ಹಾಗೂ ವಿವಿಎಸ್ ಲಕ್ಷ್ಮಣ್ (VVS Laxman) ಭಾರತ ಪರ ಟೆಸ್ಟ್ ಕ್ರಿಕೆಟ್ನಲ್ಲಿ 8,000+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ.
ಸಚಿನ್ 8,000 ರನ್ ಮೈಲುಗಲ್ಲು ತಲುಪಲು 154 ಇನ್ನಿಂಗ್ಸ್ ತೆಗೆದುಕೊಂಡಿದ್ದರು, ರಾಹುಲ್ ದ್ರಾವಿಡ್ (158 ಇನ್ನಿಂಗ್ಸ್), ವೀರೇಂದ್ರ ಸೆಹ್ವಾಗ್ (160 ಇನ್ನಿಂಗ್ಸ್), ಸುನಿಲ್ ಗವಾಸ್ಕರ್ (166 ಇನ್ನಿಂಗ್ಸ್) ಮತ್ತು ವಿವಿಎಸ್ ಲಕ್ಷ್ಮಣ್ (201 ಇನ್ನಿಂಗ್ಸ್) ತೆಗೆದುಕೊಂಡಿದ್ದರು.
Virat Kohli becomes 6th Indian batsman to reach 8000 runs