ಓರಿಯೋ ಮಿಲ್ಕ್ ಶೇಕ್
(2 ಲೋಟಗಳಿಗೆ ಬೇಕಾಗುವ ಕ್ವಾಂಟಿಟಿ)
ಒರಿಯಾ ಬಿಸ್ಕ್ಯೂಟ್ ಪ್ಯಾಕೆಟ್ – 2
ಸಕ್ಕರೆ ( ಆಪ್ಷನಲ್ )
ಹಾಲು ½ ಲೀಟರ್ ( 2 ಲೋಟ )
ಐಸ್ ಕ್ಯೂಬ್ ಗಳು
ವೆನಿಲ್ಲಾ ಐಸ್ ಕ್ರೀಮ್ ( ಆಪ್ಷನಲ್ )
ಮಾಡುವ ವಿಧಾನ : ಮೊದಲಿಗೆ ಮಿಕ್ಸಿ ಜಾರಿಗೆ ಓರಿಯೋ ಬಿಕ್ಯೂಟ್ಸ್ ಮುರಿದು ಚಿಕ್ಕ ಚಿಕ್ಕ ಪೀಸ್ ಗಳನ್ನ ಹಾಕಿ ,,, ಅದಕ್ಕೆ ಹಾಲು ( ಕಾಯಿಸಿ ಸಂಪೂರ್ಣವಾಗಿ ಆರಿದ / ಫ್ರಿಡ್ಜ್ ನಲ್ಲಿಡಲಾಗಿದ್ದ ಹಾಲು ) , ಬೇಕಿದ್ದರೆ ಸಕ್ಕರೆ , ಸೇರಿಸಿ ಜೊತೆಗೆ 2 – 3 ಐಸ್ ಕ್ಯೂಬ್ ಗಳನ್ನ ಬೇಕಿದ್ದರೆ ಸೇರಿಸಿ. ಇದು ಸಹ ಆಪ್ಷನಲ್.. ಎಲ್ಲಾ ಹಾಕಿದ ನಂತರ ಜ್ಯೂಸ್ ಮೇಕರ್ ನಲ್ಲಿ ರುಬ್ಬಿ ,,, ತೆಳು ಅಥವ ಸ್ಮೂತಿಯಂತೆ ಗಟ್ಟಿ ಹದಕ್ಕೆ ನೀವು ತಯಾರಿಸಿಕೊಳ್ಳಬಹುದು.. ಕಡೆಯದಾಗಗಿ ಲೋಟಕ್ಕೆ ಹಾಕಿದ ನಂತರ ಐಸ್ ಕ್ಯೂಬ್ಸ್ ಅಥವ ವೆನಿಲ್ಲಾ ಐಸ್ ಕ್ರೀಮ್ ಒಂದು ಸ್ಪೂನ್ ಸೇರಿಸಿಕೊಳ್ಳಿ.. ಬೇಸಿಗೆಗೆ ಇದು ಒಳ್ಳೆಯ ರಿಫ್ರೆಶಿಂಗ್ ಡ್ರಿಂಕ್.. ಮಕ್ಕಳಿಗೂ ತುಂಬಾ ಹಿಡಿಸುತ್ತದೆ..









