Bengaluru : BBMP ಕಚೇರಿಗಳ ಮೇಲೆ ಎಸಿಬಿ ದಾಳಿ ಪ್ರಕರಣ , ಸದ್ಯದಲ್ಲೆ ಹಲವು ಮಾಲ್ ಗಳಿಗೆ ಎಸಿಬಿ ನೊಟೀಸ್ ಜಾರಿ
ಬೆಂಗಳೂರು : ಬಿಬಿಎಂಪಿ ಕಚೇರಿಗಳ ಮೇಲೆ ಎಸಿಬಿ ದಾಳಿ ಪ್ರಕರಣ ಸಂಬಂಧ ಸದ್ಯದಲ್ಲೆ ಹಲವು ಮಾಲ್ ಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಎಸಿಬಿ ನೊಟೀಸ್ ಜಾರಿ ಮಾಡಲಿದೆ. ಎಸಿಬಿ ತೆರಿಗೆ ವಂಚನೆ ಸಂಬಂಧ ನೊಟೀಸ್ ನೀಡಲಿದೆ.
ಬಿಬಿಎಂಪಿ ಕಂದಾಯ ವಿಭಾಗ ಒಂದರಲ್ಲೇ ಸಾವಿರ ಕೋಟಿಗೂ ಅಧಿಕ ಆಕ್ರಮ ನಡೆದಿದೆ ಎನ್ನಲಾಗಿದೆ. ಹಲವು ಮಾಲ್ ಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಂದ ಕೋಟಿ ಕೋಟಿ ತೆರಿಗೆ ವಂಚನೆಯಾಗಿರುವ ಬಗ್ಗೆ ಆರೋಪವಿದೆ.
ಸರ್ಕಾರದ ಕಂದಾಯ ನಿಯಮಗಳನ್ನ ಗಾಳಿಗೆ ತೂರಿ ಕಡಿಮೆ ತೆರಿಗೆ ವಸೂಲಿ ಮಾಡಿರುವ ಬಗ್ಗೆ ಆರೋಪವಿದೆ.
ಎ ಝೋನ್ ನಲ್ಲಿರುವ ಮಾಲ್ ಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಂದ ಸಿ ಜೋನ್ ಮಾದರಿಯ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಹೇಳಲಾಗಿದೆ. ಎ ಜೋನ್ ನಲ್ಲಿ ಅತ್ಯಧಿಕ ತೆರಿಗೆ ವಸೂಲಿ ಆಗುತ್ತದೆ ಎಂಬ ಆರೋಪವಿದೆ.
2016 ರಿಂದ ಇದೇ ರೀತಿ ತೆರಿಗೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ಗೊತ್ತಾಗಿದ್ದು , ಸದ್ಯ ತೆರಿಗೆ ವಂಚಿಸಿರುವ ಮಾಲ್ ಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಲಿಸ್ಟ್ ಅನ್ನ ಎಸಿಬಿ ಅಅಧಿಕಾರಿಗಳು ರೆಡಿ ಮಾಡಿಕೊಳ್ತಿದ್ಧಾರೆ ಎನ್ನಲಾಗಿದೆ.