Ukraine : ಉಕ್ರೇನ್ ನಲ್ಲಿ ಕರ್ನಾಟಕ ಹಾಸನ ಮೂಲದ ವಿದ್ಯಾರ್ಥಿ ಗಗನ್ ಗೌಡ ಕಾರ್ಕೀವ್ ನಿಂದ ಪೋಲಾಂಡ್ ಗಡಿಯತ್ತ ಪ್ರಯಾಣ
ಹಾಸನ : ಯುದ್ಧ ಪೀಡಿತ ದೇಶ ಉಕ್ರೇನ್ ನಲ್ಲಿ ಕರ್ನಾಟಕ ಹಾಸನ ಮೂಲದ ವಿದ್ಯಾರ್ಥಿ ಗಗನ್ ಗೌಡ ಸಿಲುಕಿದ್ದಾರೆ.. ಸತತ 9 ದಿನಗಳ ಸಂಕಷ್ಟ ದ ಬಳಿಕ ಕಾರ್ಕೀವ್ ನಿಂದ ಪೋಲಾಂಡ್ ಗಡಿಯತ್ತ ಪ್ರಯಾಣ ಬೆಳೆಸಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.
ರಷ್ಯಾ ಕದನ ವಿರಾಮ ಘೋಷಣೆ ಹಿನ್ನೆಲೆ ಕರ್ನಾಟಕದ ಇತರೆ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೊತೆ ತವರಿನತ್ತ ತೆರಳಲು ಪ್ರಯಾಣ ಬೆಳೆಸಿದ್ದಾನೆ.
ಕಾರ್ಕೀವ್ ನಿಂದ ಕಾಲ್ನಡಿಗೆ ಮೂಲಕ ಪಿಸೋಚಿನ್ ತಲುಪಿ ಅಲ್ಲಿ ಆಶ್ರಯ ಪಡೆದಿದ್ದ ವಿದ್ಯಾರ್ಥಿಗಳು ಭಾರತೀಯ ರಾಯಭಾರಿ ಕಛೇರಿ ವ್ಯವಸ್ಥೆ ಮಾಡಿದ್ದ ಬಸ್ ಮೂಲಕ ಹೊರಟಿದ್ದಾರೆ ಎಂದು ಗಗನ್ ತಾಯಿ ಸುಜಾತ ಮಾಹಿತಿ ನೀಡಿದ್ದಾರೆ.
ನಿನ್ನೆ ಸಂಜೆ ಮಗ ಬಸ್ ಏರಿ ಗಡಿಯತ್ತ ಹೊರಟಿದ್ದಾನೆ ಎಂದು ಹಾಸನ ನಗರದ ಬಿ ಕಾಟಿಹಳ್ಳಿಯಲ್ಲಿ ಗಗನ್ ತಾಯಿ ಸುಜಾತ ಹೇಳಿದ್ದಾರೆ.
ಇನ್ನ ಈಗಾಗಲೆ ವಿದ್ಯಾರ್ಥಿಗಳ ತಂಡ 450 ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ.. ಸತತ ಮೂರು ನಾಲ್ಕು ದಿನಗಳಿಂದ ಊಟ ತಿಂಡಿ ಇಲ್ಲದೆ ನರಳಾಡಿದ್ದಾರೆ. ಆದರೂ ಮಗ ಬರ್ತಿರೋ ಸುದ್ದಿ ಕೇಳಿ ಖುಷಿಯಾಗಿದೆ.
ತುಂಬಾ ಆತಂಕ ಸೃಷ್ಟಿ ಆಗಿತ್ತು, ಬಾಂಬ್ ಮಿಸೈಲ್ ಬ್ಲಾಸ್ಟ್ ನಮ್ಮ ಭಯ ಹೆಚ್ಚಿಸಿತ್ತು. ನವೀನ್ ಸಾವಿನ ಬಳಿಕ ನಮಗೆ ಭಯ ಹೆಚ್ಚಾಗಿತ್ತು. ನನ್ನ ಮಗ ಅತ್ಯಂತ ಅಪಾಯದಲ್ಲಿ ಇದ್ದ, ಈಗ ನನ್ನ ಮಗ ಪುನರ್ಜನ್ಮ ಪಡೆದಂತೆ ವಾಪಸ್ ಬರ್ತಿದಾನೆ. ಬರಿ ಬ್ರೆಡ್ ಬಿಸ್ಕತ್ತು ತಿಂದು ದಿನ ಕಳೆದಿದ್ದಾರೆ.
ಅಲ್ಲಿಂದ ವಾಪಸ್ ಬರೋಕು ಹಣ ಇರಲಿಲ್ಲ. ಹಾಗಾಗಿ ರಾಯಭಾರ ಕಛೇರಿಯಿಂದಲೇ ಉಚಿತ ಬಸ್ ವ್ಯವಸ್ಥೆ ಮಾಡಿದ್ದಾರೆ. ಮಗ ಹೊರಟಿರೋ ಸುದ್ದಿ ಸ್ವಲ್ಪ ನೆಮ್ಮದಿ ತರಿಸಿದೆ. ಮಂಗಳವಾರ ಅಥವಾ ಬುದವಾರ ಮಗ ಮನೆಗೆ ಬರೋ ನಿರೀಕ್ಷೆ ಇದೆ ಎಂದಿದ್ದಾರೆ..
ಗಗನ್ ಕಾರ್ಕೀವ್ ನಲ್ಲಿ ಪ್ರಥಮ ವರ್ಷದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ. ಮೂರು ದಿನಗಳ ಹಿಂದೆ ರೈಲು ಹತ್ತೋ ಯತ್ನ ಮಾಡಿದ್ದರು. ಆದರೆ ಅದು ಸಾದ್ಯವಾಗದೆ 40. ಕಿಲೋಮೀಟರ್ ನಡೆದು ಪಿಸೊಚಿನ್ ನಲ್ಲಿ ಆಶ್ರಯ ಪಡೆದಿದ್ದರು. ಇದೀಗ ರಾಯಭಾರ ಕಛೇರಿ ನೆರವಿನಿಂದ ವಾಪಸ್ ಬರ್ತಿರೋದಾಗಿ ಮಾಹಿತಿ ನೀಡಿದ್ದಾರೆ ಅವರ ಪೋಷಕರು..








