Prashant rai | ಪುತ್ತೂರಿನ ಮುತ್ತು ಪ್ರಶಾಂತ್ ರೈಗೆ ಹುಟ್ಟೂರಲ್ಲಿ ಸನ್ಮಾನ..!
2022ರ ಪ್ರೋ ಕಬಡ್ಡಿಯಲ್ಲಿ ಪಾಟ್ನಾ ಪೈರೆಟ್ಸ್ ತಂಡದ ನಾಯಕ ಪ್ರಶಾಂತ್ ರೈ ಅವರನ್ನು ತವರೂರಲ್ಲಿ ಸನ್ಮಾನ ಮಾಡಲಾಯ್ತು.
ಎಂಟನೇ ಆವೃತ್ತಿಯ ಪ್ರೋ ಕಬಡ್ಡಿಯಲ್ಲಿ ರನ್ನರ್ ಅಪ್ ಅಗಿದ್ದ ಪಾಟ್ನಾ ಪೈರೆಟ್ಸ್ ತಂಡ ಫೈನಲ್ ನಲ್ಲಿ ವಿರೋಚಿತ ಸೋಲು ಅನುಭವಿಸಿತ್ತು.
ಇದೀಗ ಟೂರ್ನಿ ಮುಗಿದ ನಂತರ ಇದೇ ಮೊದಲ ಬಾರಿ ತವರೂರು ಪುತ್ತೂರಿಗೆ ಆಗಮಿಸಿದ್ದ ಪ್ರಶಾಂತ್ ರೈ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯ್ತು.
ಸಂತ ಫಿಲೋಮಿನಾ ಕಾಲೇಜ್ ನ ಹಳೆ ವಿದ್ಯಾರ್ಥಿಯಾಗಿರುವ ಪ್ರಶಾಂತ್ ರೈ ಅವರನ್ನು ಸಂತ ಫಿಲೋಮಿನಾ ಕಾಲೇಜ್ ಆಡಳಿತ ಮಂಡಳಿ, ಪುತ್ತೂರು ತಾಲೂಕು ಅಮೇಚೂರ್ ಕಬಡ್ಡಿ ಸಂಸ್ಥೆ ಹಾಗೂ ಪ್ರಶಾಂತ್ ರೈ ಅವರ ಹುಟ್ಟೂರು ಕೈಕಾರ ಜನತೆಯ ಜಂಟಿ ಆಶ್ರಯದಲ್ಲಿ ಪೌರ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯ್ತು.
ಸಂತ ಫಿಲೋಮಿನಾ ಕಾಲೇಜ್ ನ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಿತ್ತು.









