ಮನೆ ಮಾಲೀಕರಿಗೆ ಪಂಗನಾಮ ಹಾಕಿ ಚಿನ್ನಾಭರಣ, ಹಣ ಕದ್ದು ಎಸ್ಕೇಪ್ ಆಗಿದ್ದ ಖತರ್ನಾಕ್ ಖದೀಮರನ್ನ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ..
ಅಕ್ಕ ತಂಗಿಯರಾದ ಸುಮಯ್ಯ ತಾಜ್( 23) , ನಾಜೀಮಾ ತಾಜ್(32), ನಾಜೀಮಾ ತಾಜ್ ಪತಿ ಅಕ್ಬರ್ (38) ಬಂಧಿತ ಆರೋಪಿಗಳಾಗಿದ್ದಾರೆ..
ಜಯನಗರ 1 ನೇ ಬ್ಲಾಕ್ ನ ದಯಾನಂದ ನಗರದಲ್ಲಿ ಈ ಘಟನೆ ನಡೆದಿದ್ದು , ಜಬಿ ಹಾಗೂ ಹಾಜಿರಾ ದಂಪತಿ ಮನೆಯಲ್ಲಿ ಈ ಮೂವರು ಕನ್ನ ಹಾಕಿ ಎಸ್ಕೇಪ್ ಆಗಿದ್ರು..
ಬೀರು ಬೀಗ ಒಡೆದು 2.34 ಲಕ್ಷ ಮೌಲ್ಯದ 58 ಗ್ರಾಂ ಚಿನ್ನಾಭರಣ, 10 ಲಕ್ಷ ನಗದು ಹಣ ಕದ್ದು ಪರಾರಿಯಾಗಿದ್ದರು. ಫೆಬ್ರವರಿ 19 ರಂದು ಘಟನೆ ನಡೆದಿತ್ತು..
ಜಬಿ ಹಾಗೂ ಹಾಜಿರಾ ದಂಪತಿಗೆ 13 ವರ್ಷದ ಮಗ, ಹಾಗೂ ಮಗಳು ಇದ್ದಾಳೆ . ಮೊದಲ ಮಹಡಿಯಲ್ಲಿರುವ ಮನೆಯಲ್ಲಿ ಮಾಲೀಕರು ವಾಸವಿದ್ದು, ಎರಡನೇ ಮಹಡಿಗೆ ಇತ್ತೀಚೆಗೆ ಬಾಡಿಗೆಗೆ ಆರೋಪಿಗಳು ಬಂದಿದ್ದರು..
ಮಗ ಟೆರಸ್ ಗೆ ಬಂದು ಆಟ ಆಡುವಾಗಲೆಲ್ಲ ಮನೆಯಲ್ಲಿ ಹಣ ಇರೊ ವಿಚಾರ ಹೇಳಿಕೊಳ್ತಿದ್ದ ಎನ್ನಲಾಗಿದೆ. ದಂಪತಿ ಲಾರಿ ಮಾರಿ ಮಗಳ ಮದುವೆಗೆ ಹಣ, ಒಡವೆಯನ್ನ ತಂದಿಟ್ಟಿದ್ದರು.
ಹಣ ಇರುವ ಕುರಿತು ಮಾಹಿತಿ ತಿಳಿದು ಖತರ್ನಾಕ್ ಕಳ್ಳಿಯರು ಹಣ , ಒಡವೆ ದೋಚಿದ್ದಾರೆ.. ಮಗಳು ಕಾಲೇಜಿಗೆ ಹೋಗಿದ್ದಳು. 13 ವರ್ಷದ ಮಗ ಟೆರಸ್ ಮೇಲೆ ಆಟವಾಡುತ್ತಿದ್ದ..
ಹಾಜಿರಾ 1 ಗಂಟೆ ಸುಮಾರಿಗೆ ಸಂಬಂಧಿಯೊಬ್ಬರನ್ನು ನೋಡಲು ಆಸ್ಪತ್ರೆಗೆ ಹೋಗಿದ್ದರು.. ಈ ವೇಳೆ ಆರೋಪಿಗಳು ಕೃತ್ಯವೆಸಗಿದ್ದಾರೆ..
ನಕಲಿ ಕೀ ಬಳಸಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದ ತಂಗಿ ಸುಮಯ್ಯಾ ತಾಜ್ ಹಾಗೂ ಅಕ್ಬರ್ ರಾಡ್ ನಿಂದ ಬೀರು ಹೊಡೆದು ಹಣ ,ಒಡವೆ ಕಳ್ಳತನ ಮಾಡಿದ್ದಾರೆ.
ನಂತರ ತಂದೆಯ ಮನೆ ತುಮಕೂರಿಗೆ ಎಸ್ಕೇಪ್ ಆಗಿದ್ದರು.. ಕದ್ದ ಹಣದಲ್ಲಿ 14 ಚೂಡಿದಾರ ಸೇರಿದಂತೆ ಹಲವು ಬಟ್ಟೆ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.. ಸದ್ಯ ಬಂಧಿತರಿಂದ 4 ಲಕ್ಷ ನಗದು,2.79 ಲಕ್ಷ ಮೌಲ್ಯದ ಆಭರಣ ವಶಕ್ಕೆ ಪಡೆಯಲಾಗಿದೆ.








