ತಾಯ್ನಾಡಿಗೆ ಮರಳಿದ 200 ಭಾರತೀಯರು – Saaksha Tv
ನವದೆಹಲಿ: ಆಪರೇಷನ್ ಗಂಗಾ ಕಾರ್ಯಾಚರಣೆ ಅಡಿಯಲ್ಲಿ ಇಂದು 200 ಭಾರತೀಯ ನಾಗರಿಕರು ತಾಯ್ನಾಡಿಗೆ ಮರಳಿದ್ದಾರೆ.
ಆಪರೇಷನ್ ಗಂಗಾ ಕಾರ್ಯಾಚರಣೆ ಅಡಿಯಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲಾಗುತ್ತಿದ್ದು, ಇಲ್ಲಿಯವರೆಗೆ 17 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಕರೆತರಲಾಗಿದೆ. ಇಂದು 200 ಭಾರತೀಯ ನಾಗರಿಕರನ್ನು ಹೊತ್ತ ವಿಶೇಷ ವಿಮಾನ ರೊಮೇನಿಯಾದಿಂದ ನವದೆಹಲಿಗೆ ಬಂದಿಳಿದಿದೆ.
ಇಂದು ರೊಮೇನಿಯಾದಿಂದ 200 ಜನರು ವಿಶೇಷ ವಿಮಾನದಲ್ಲಿ ನವದೆಹಲಿ ತಲುಪಿದ್ದಾರೆ. ದೆಹಲಿಗೆ ಬಂದಿಳಿದ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.ಅಲ್ಲದೇ ರಷ್ಯಾ ಮೂರನೇ ಬಾರಿಗೆ ಘೋಷಿಸಿದ ಕದನ ವಿರಾಮ ವಿಫಲವಾಗಿದೆ.








