ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ 5 ಜನರ ಸಾವು – Saaksha Tv
ಕೊಚ್ಚಿನ್: ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ 5 ಜನರು ಸಾವನ್ನಪಿರುವ ಘಟನೆ ಕೇರಳದ ವರ್ಕಾಲಾದಲ್ಲಿ ನಡೆದಿದೆ.
ಪ್ರತಾಪನ್ (62), ಶೆರ್ಲಿ (53) ಅಭಿರಾಮಿ (25) ಅಖಿಲ್ (29) ಮತ್ತು 8 ತಿಂಗಳ ಅಭಿರಾಮ್ ಮೃತ ದುರ್ದೈವಿಗಳು. ಮಂಗಳವಾರ ಬೆಳಗಿನ ಜಾವ 1:45 ರ ಸುಮಾರಿಗೆ ಬೆಂಕಿ ತಗುಲಿದ್ದು, ಬೆಂಕಿ ಕಾಣಿಸಿಕೊಂಡ ತಕ್ಷಣ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ಐದು ಬೈಕ್ ಗಳು, ಮನೆಯಲ್ಲಿದ್ದ ಎಸಿ ಸುಟ್ಟು ಹೋಗಿವೆ. ಘಟನೆಯಿಂದ ತೀರ್ವ ಗಾಯಗೊಂಡಿರುವ ಪ್ರತಾಪನ್ ಅವರ ಹಿರಿಯ ಮಗ ನಿಹುಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವರ್ಕಾಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಕಾರಣದ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಪೋರೆನ್ಸಿಕ್ ತಜ್ಞರು ಸ್ಥಳವನ್ನು ಪರಿಸೀಲಿಸಿದ ನಂತರ ಎಲ್ಲಾ ಕೋನಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾಆರಿ (ಎಸ್ ಪಿ) ದಿವ್ಯಾ ಗೋಪಿನಾಥ್ ಹೇಳಿದ್ದಾರೆ.








