Kolar | ಹಳಿ ಮೇಲೆ ನಿಂತಿದ್ದವರ ಮೇಲೆ ಹರಿದ ರೈಲು
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಘಟನೆ
ಕ್ಷಣದಲ್ಲಿ ತಪ್ಪಿದ ದೊಡ್ಡ ರೈಲು ದುರಂತ
ಕೆಜಿಎಫ್ ಮೂಲದ ವ್ಯಕ್ತಿ ಕೊನೆಯುಸಿರು
ಇಂದು ಬೆಳಿಗ್ಗೆ ಎಂಟು ಗಂಟೆಗೆ ನಡೆದ ಘಟನೆ
ಕೋಲಾರ : ರೈಲಿನಿಂದ ಇಳಿದು ಪಕ್ಕದ ಹಳಿಯ ಕಡೆ ನಡೆದುಕೊಂಡು ಹೋಗುತ್ತಿದ್ದ ಪ್ರಯಾಣಿಕರ ಮೇಲೆ ರೈಲು ಹರಿದು ಓರ್ವ ಮೃತಪಟ್ಟು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ನಡೆದಿದೆ.
ಇಂದು ಬೆಳಗ್ಗೆ 8 ಗಂಟೆಗೆ ನಡೆದ ಈ ಘಟನೆಯಲ್ಲಿ ಕೆಜಿಎಫ್ ಮೂಲದ ವ್ಯಕ್ತಿ ಸಾವನ್ನಪ್ಪಿದ್ದು, ಮೃತನ ಗುರುತು ಪತ್ತೆಯಾಗಿಲ್ಲ.
ಘಟನೆಯಲ್ಲಿ 20 ಜನ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಂಗಳೂರಿನ ವೈಟ್ ಫೀಲ್ಡ್‍ನಲ್ಲಿ ತಾಂತ್ರಿಕ ದೋಷವಾಗಿ ಸಿಗ್ನಲ್ ತೊಂದರೆ ಉಂಟಾಗಿತ್ತು.
ಇದರಿಂದಾಗಿ ತೆರಕಲ್ಲು ಮತ್ತು ಮಾಲೂರಿನಲ್ಲಿ ರೈಲುಗಳು ಅಲ್ಲಲ್ಲೇ ನಿಂತಿತ್ತು.
ಈ ವೇಳೆ ಪ್ಯಾಸೆಂಜರ್ ರೈಲಿನಿಂದ ಇಳಿದು ಪಕ್ಕದ ಹಳಿಯ ಕಡೆ ಪ್ರಯಾಣಿಕರು ನಡೆದುಕೊಂಡು ಹೋಗುತ್ತಿದ್ದರು.
ಆಗ ಏಕಾಏಕಿ ಶತಾಬ್ದಿ ರೈಲು ವೇಗವಾಗಿ ಬಂದಿದೆ. ಇದರಿಂದ ಅಲ್ಲಿದ್ದ ಜನ ಚೆಲ್ಲಾಪಿಲ್ಲಿಯಾಗಿದ್ದಾರೆ. ಆದರೂ ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಒಂದು ವೇಳೆ ಅವರು ಅಲ್ಲಿಂದ ಓಡದೇ ಹೋಗದೇ ಇದ್ದಿದ್ದರೆ ನೂರಾರು ಜನರು ರೈಲಿಗೆ ಬಲಿಯಾಗಬೇಕಾಗುವ ಸಾಧ್ಯತೆ ಇತ್ತು.
Bangalore-Chennai Shatabdi Express train turn over people who stood on the track in Kolar









