Covid19 : ಭಾರತದಲ್ಲಿಲ್ಲ ಕೋವಿಡ್ ನಾಲ್ಕನೇ ಅಲೆ…!!!
ಭಾರತ ಅಷ್ಟೇ ಅಲ್ದೇ ಇಡೀ ವಿಶ್ವವನ್ನೇ ಕೋವಿಡ್ ಮಹಾಮಾರಿ ಇನ್ನಲ್ಲಿದಂತೆ ಕಾಡಿದೆ. ಮೂರು ಕೋವಿಡ್ ಅಲೆಗಳಿಂದ ಭಾರತದಲ್ಲಿ ಆರ್ಥಿಕ ಪರಿಸ್ಥಿತಿ ಮುಗ್ಗರಿಸಿರುವುದು ಒಂದೆಡೆಯಾದ್ರೆ , ಅನೇಕರ ಜೀವನ ಅಸ್ತವ್ಯಸ್ತವಾಗಿದೆ.. ಹಲವರು ಉದ್ಯೋಗ ಕಳೆದುಕೊಂಡರು ಲಕ್ಷಾಂತರ ಜನರು ಜೀವ ಕಳೆದುಕೊಂಡರು..
ಸದ್ಯ ಈಗ ಕೋವಿಡ್ ಮೂರನೇ ಅಲೆ ತಗ್ಗಿದೆ.. 5000 ಕ್ಕಿಂತ ಕಡಿಮೆ ದೈನಂದಿನ ಕೇಸ್ ಗಳು ದಾಖಲಾಗ್ತಿವೆ.. ಈ ನಡುವೆ ಭಾರತೀಯರಿಗೆ ಒಂದು ಸಮಾಧಾನಕರ ವಿಚಾರ ಗೊತ್ತಾಗಿದೆ.
ಅದೇನೆಂದ್ರೆ ಹೊಸ ರೂಪಾಂತರ ತಳಿಯು ಸೃಷ್ಟಿಯಾಗದಿದ್ದರೆ ನಾಲ್ಕನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಸೂಕ್ಷ್ಮ ರೋಗಾಣು ತಜ್ಞ ಟಿ.ಜಾಕೊಬ್ ಜಾನ್ ಹೇಳಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕರೂ ಆದ ಜಾನ್ ಅವರು ಮುಂದಿನ ನಾಲ್ಕು ವಾರದಲ್ಲಿ ಮೂರನೇ ಅಲೆ ಅಂತ್ಯವಾಗಲಿದೆ ಎಂದು ಅಅಭಿಪ್ರಾಯಪಟ್ಟಿದ್ದಾರೆ.
ಬಹುತೇಕ ಎಲ್ಲ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಸದ್ಯ ಒಂದೇ ಗತಿಯಲ್ಲಿದೆ. ನಿತ್ಯದ ಸೋಂಕು ಪ್ರಮಾಣವು ಕ್ರಮೇಣ ಕುಗ್ಗುತ್ತಿದೆ. ಇನ್ನೂ ಸೋಂಕಿನ ಜೊತೆಗೇ ಜನರು ಜೀವಿಸುವುದೇ ಅಂತಿಮ ಹಂತವಾಗಬಹುದೆಂದು ತಿಳಿಸಿದ್ದಾರೆ..








