ಷೇರು ಮಾರುಕಟ್ಟೆ – ಮಿಶ್ರ ಸೂಚನೆಗಳ ನಡುವೆ ಸೆನ್ಸೆಕ್ಸ್ ಮತ್ತು ನಿಫ್ಟಿ 2% ಏರಿಕೆ…
ಸೆನ್ಸೆಕ್ಸ್ ಮತ್ತು ನಿಫ್ಟಿ ಷೇರುಗಳು ಇಂದು ಮಧ್ಯಾಹ್ನದ ವಹಿವಾಟಿನಲ್ಲಿ ಸುಮಾರು 2 % ಏರಿಕೆ ಕಂಡಿವೆ. ಜಾಗತಿಕ ಷೇರು ಮಾರುಕಟ್ಟೆಗಳಿಂದ ಮಿಶ್ರ ಸೂಚನೆಗಳ ನಡುವೆಯೂ ಎರಡೂ ಷೇರುಗಳು ಜಿಗಿತ ಕಂಡಿವೆ. ಬಿಎಸ್‌ಇ ಸೆನ್ಸೆಕ್ಸ್ 54,500 ಮಾರ್ಕ್‌ಗಿಂತ ಹೆಚ್ಚು ವಹಿವಾಟು ನಡೆಸುತ್ತಿದ್ದರೆ, ಎನ್‌ಎಸ್‌ಇ ನಿಫ್ಟಿ 16,300 ಮಟ್ಟಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿದೆ.
ಸೆನ್ಸೆಕ್ಸ್ 1161 ಪಾಯಿಂಟ್‌ಗಳು ಅಥವಾ 2.17 ಶೇಕಡಾ ಏರಿಕೆ ಕಂಡು 54,585 ನಲ್ಲಿ ವಹಿವಾಟು ನಡೆಸಿತು. ನಿಫ್ಟಿ ಕೂಡ 318 ಪಾಯಿಂಟ್‌ಗಳು ಅಥವಾ 1.99 % ಏರಿಕೆ ಗಳಿಸಿ 16,331 ನಲ್ಲಿ ವಹಿವಾಟು ನಡೆಸಿತು.
ಫಾರೆಕ್ಸ್ ಮಾರುಕಟ್ಟೆಯಲ್ಲಿ, ಡಾಲರ್ ಎದುರು ರೂಪಾಯಿ ಮೌಲ್ಯವು 10 ಪೈಸೆ ಏರಿಕೆಯಾಗಿದೆ. ದಿನದ ವಹಿವಾಟಿನಲ್ಲಿ, ಕೊನೆಯದಾಗಿ ವರದಿಗಳು ಬಂದಾಗ ದೇಶೀಯ ಕರೆನ್ಸಿ ಪ್ರತಿ ಡಾಲರ್‌ಗೆ 76 ರೂಪಾಯಿ ಮತ್ತು 82 ಪೈಸೆಯಲ್ಲಿ ವಹಿವಾಟು ನಡೆಸುತ್ತಿತ್ತು.








