ADVERTISEMENT
Wednesday, June 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರೀಡೆ

fifa worldcup2026-ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು

admin by admin
June 24, 2026
in ಕ್ರೀಡೆ, Newsbeat, Sports
FIFA World Cup 2026 Cristiano Ronaldo Lionel Messi

FIFA World Cup 2026 Cristiano Ronaldo Lionel Messi

Share on FacebookShare on TwitterShare on WhatsappShare on Telegram

 

ಸಿಆರ್ & ಎಲ್‍ಎಂ..!

Related posts

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

June 24, 2026
ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಯೋಜನೆಯಲ್ಲಿ ಎಡವಟ್ಟು; ಮಹಾಲೇಖಪಾಲರ ಕಚೇರಿಯಿಂದ ಸ್ಪಷ್ಟನೆ ಕೋರಿದ ಸರ್ಕಾರ

June 24, 2026

ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ ಎರಡು ಅತ್ಯದ್ಭುತವಾದ ಮಾನವ ಯಂತ್ರಗಳು.

ಹೌದು, 1985 ಮಾಡೆಲ್, ಪೋರ್ಚ್‍ಗಲ್ ಬ್ರ್ಯಾಂಡ್, ಚಾಸಿಸ್ ನಂಬರ್ ಸಿಆರ್-07 ಇಂಜಿನ್.  ಫುಟ್‍ಬಾಲ್ ಮೈದಾನದಲ್ಲಿ ಧೂಳೆಬ್ಬಿಸುತ್ತಿರುವುದನ್ನು ನೋಡಿದಾಗ, ರೇಸಿಂಗ್ ಟ್ರ್ಯಾಕ್‍ನಲ್ಲಿ ಚಿಮ್ಮುವ ಫೆರಾರಿ ಕಾರು ನೆನಪಿಗೆ ಬರುತ್ತದೆ. ಹಾಗೇ ಎಲ್‍ಎಂ ಇಂಜಿನ್ ಕೂಡ. 1987 ಮಾಡೆಲ್. ಅರ್ಜೆಂಟಿನಾ ಬ್ರ್ಯಾಂಡ್. ಚಾಸಿಸ್ ನಂಬರ್ ಎಲ್‍ಎಂ-10 ಇಂಜಿನ್.  ಮೈದಾನದಲ್ಲಿ ಲವಲವಿಕೆಯಿಂದ ನವಿರಾಗಿ ಸಂಚರಿಸುವುದನ್ನು ನೋಡಿದಾಗ, ರಾಜಗಾಂಭೀರ್ಯದಿಂದ ರಸ್ತೆಯಲ್ಲಿ ಚಲಿಸುವ ರೋಲ್ಸ್ ರಾಯ್ಸ್ ಕಾರು ಕಣ್ಣೇದುರು ಬರುತ್ತದೆ. ಇದೊಂದು ಜಸ್ಟ್ ಕಲ್ಪನೆಯ ಹೋಲಿಕೆಯಷ್ಟೇ..!

ಆದ್ರೆ, ಕಳೆದ ಎರಡು ದಶಕಗಳಿಂದ ಫುಟ್‍ಬಾಲ್ ಮೈದಾನದಲ್ಲಿ ಸಿಆರ್ -7 ಮತ್ತು ಎಲ್‍ಎಂ-10 ಮಾಡಿರುವ ಸಂಚಲನ ನಿಜಕ್ಕೂ ಬೆರಗುಮೂಡಿಸುತ್ತದೆ. ಶಕ್ತಿ, ವೇಗ, ಆಕ್ರಮಣಕಾರಿ ಪ್ರವೃತ್ತಿಯೇ ಸಿಆರ್-7 ವೈಶಿಷ್ಟ್ಯ. ಯುಕ್ತಿ..ತಾಳ್ಮೆ, ನಿಖರತೆಯ ಕಲಾತ್ಮಕತೆಯ ನಡೆಯೇ ಎಲ್‍ಎಂ-10 ಆಕರ್ಷಣೆ.

ಅದೇನೇ ಕಲ್ಪನೆಯೇ ಇರಲಿ, ಒಂದಂತೂ ಸತ್ಯ.  ಕ್ರಿಸ್ಟಿಯಾನೋ ರೋನಾಲ್ಡೊ ಮತ್ತು ಲಿಯೋನಲ್ ಮೆಸ್ಸಿ, ಆಧುನಿಕ ಫುಟ್‍ಬಾಲ್ ಜಗತ್ತಿನ ಎರಡು ಕಣ್ಣುಗಳಿದ್ದಂತೆ. ಅಷ್ಟೇ ಅಲ್ಲ, ಆಲ್ ಟೈಮ್ ಗ್ರೆಟೆಸ್ಟ್ ಪ್ಲೇಯರ್ ಅಂತ ಯಾರನ್ನು ಕರೆಯುವುದು ಅನ್ನೋದೇ ದೊಡ್ಡ ಕನ್‍ಫ್ಯೂಷನ್. ಮೆಸ್ಸಿ ಅಭಿಮಾನಿಗಳಿಗೆ ಮೆಸ್ಸಿಯೇ ಗ್ರೇಟ್.. ಕ್ರಿಸ್ಟಿ ಅಭಿಮಾನಿಗಳಿಗೆ ಕ್ರಿಸ್ಟಿಯೇ ಗ್ರೇಟ್. ಆದ್ರೆ ನಿಜವಾಗಿಯೂ ಯಾರು ಗ್ರೇಟ್ ಎಂಬುದಕ್ಕೆ ನಿಖರವಾದ ಉತ್ತರವಿಲ್ಲ. ಯಾಕಂದ್ರೆ ಇಬ್ಬರೂ ಕೂಡ ಎವರ್‍ಗ್ರೀನ್ ಪ್ಲೇಯರ್ಸ್. ಹಾಗಾಗಿ ಯಾರು ಗ್ರೇಟ್ ಎಂಬುದು ಅವರವರ ಭಾವಕ್ಕೆ ಬಿಟ್ಟಿರುವ ವಿಚಾರ.

ಫುಟ್‍ಬಾಲ್ ಆಟವನ್ನು ಮನಸಾರೆ ಪ್ರೀತಿಸುತ್ತಿರುವ ಮೆಸ್ಸಿ ಮತ್ತು ಕ್ರಿಸ್ಟಿಗೆ ಪ್ರಪಂಚದಲ್ಲಿ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಅಭಿಮಾನಿಗಳ ನಡುವೆ ಸಂಘರ್ಷಗಳು ನಡೆದ್ರೂ ಮೆಸ್ಸಿ ಮತ್ತು ಕ್ರಿಸ್ಟಿ ಯಾವತ್ತೂ ಜಗಳ ಮಾಡಿಕೊಂಡವರಲ್ಲ. ಇಬ್ಬರ ನಡುವೆಯೂ ಪರಸ್ಪರ ಗೌರವ, ಸ್ನೇಹದ ಬಾಂಧವ್ಯವಿದೆ. ಮೈದಾನದಲ್ಲಿ ದಾಖಲೆ ಬರೆದ್ರೂ, ಪರಸ್ಪರ ವಿರುದ್ದವಾಗಿ ಆಡಿದ್ರೂ  ಟೀಕೆ – ಟಿಪ್ಪಣಿ ಮಾಡಿದವರಲ್ಲ. ಮೆಸ್ಸಿಗೆ ಫುಟ್‍ಬಾಲ್ ಆಟ ಅಂದ್ರೆ ದೈವದತ್ತವಾಗಿ ಬಂದಿರುವ ಕಲೆ. ಆದ್ರೆ ಕ್ರಿಸ್ಟಿಯಾನೋ ರೋನಾಲ್ಡೊ ಕಠಿಣ ಪರಿಶ್ರಮದಿಂದ ಫುಟ್‍ಬಾಲ್ ಆಟವನ್ನು ಸಿದ್ಧಿಸಿಕೊಂಡಿರುವುದು. ಬಾಲ್ಯದಲ್ಲೇ ಇಬ್ಬರು ಅನಾರೋಗ್ಯಕ್ಕೊಳಗಾಗಿದ್ದರು. ಕ್ರಿಸ್ಟಿಯಾನೋಗೆ 15ರ ಹರೆಯದಲ್ಲಿ ಹೃದಯದ ಸಮಸ್ಯೆ  ಕಾಡಿತ್ತು. ಹಾಗೇ ಮೆಸ್ಸಿ ತನ್ನ 11ರ ಹರೆಯದಲ್ಲಿ  ಹಾರ್ಮೊನ್ ಸಮಸ್ಯೆಯಿಂದ ಬಳಲುತ್ತಿದ್ದ. ಇಬ್ಬರು ಕೂಡ ಆರೋಗ್ಯ ಸಮಸ್ಯೆ ಎದುರಿಸಿದ್ರೂ ಫುಟ್‍ಬಾಲ್ ಆಟ ಅವರಿಗೆ ಮರುಜನ್ಮವನ್ನೇ ನೀಡಿದೆ.

ನಿಜ, ಭೋರ್ಗರೆಯುವ ಕಡಲಿನ ಅಬ್ಬರದಂತೆ ಆಡುವ ಕ್ರಿಸ್ಟಿಯಾನೋ ಆಟ ಎಷ್ಟು ರೋಮಾಂಚನಗೊಳಿಸುತ್ತದೆಯೋ ಅದೇ ರೀತಿ, ಶಾಂತವಾಗಿ ವೈಯಾರದಿಂದ ದಡ ಸೇರುವ ಅಲೆಗಳಂತೆ ಮೆಸ್ಸಿ ಆಟವೂ ಕಣ್ಮನ ಸೆಳೆಯುತ್ತದೆ. ಮೆಸ್ಸಿ ಆಟದಲ್ಲಿ ತಾಳ್ಮೆ ಮತ್ತು ನೈಪುಣ್ಯತೆಯಿಂದ ಪಂದ್ಯ ಗೆಲ್ಲುವ ತಂತ್ರವಿದೆ. ಆದ್ರೆ ಕ್ರಿಸ್ಟಿಯಾನೋ ರೋನಾಲ್ಡೊ ಆಟದಲ್ಲಿ ಹಾಗಿಲ್ಲ. ವೇಗ ಮತ್ತು ಆಕ್ರಮಣಕಾರಿ ಪ್ರವೃತ್ತಿಯಿಂದ ಪಂದ್ಯ ಗೆಲ್ಲುವ ತಾಕತ್ತಿದೆ. ಮೆಸ್ಸಿ ಕಾಲ್ಚಳಕದಿಂದ ಎದುರಾಳಿ ಆಟಗಾರರನ್ನು ತಬ್ಬಿಬ್ಬುಗೊಳಿಸುತ್ತಾನೆ. ಹಾಗೇ ಅದ್ಭುತವಾದ ಪ್ಲೇಮೇಕರ್ ಕೂಡ ಹೌದು. ಆದ್ರೆ ಕ್ರಿಸ್ಟಿಯಾನೋ ಒಂಟಿ ಸಲಗ. ಮುನ್ನುಗ್ಗಿ ಎದುರಾಳಿ ಆಟಗಾರರನ್ನು ಬೆಚ್ಚಿಬೀಳಿಸಿ ಗೋಲು ಗಳಿಸುವ ರಣಬೇಟೆಗಾರ.

ಅಂದ ಹಾಗೇ, ಲಿಯೋನಾಲ್ ಮೆಸ್ಸಿ ಆಟದಲ್ಲಿ ಸಂಗೀತದ ನವರಸಗಳನ್ನು ಕಾಣಬಹುದು.. ಆದ್ರೆ ಕ್ರಿಸ್ಟಿಯಾನೋ ಆಟದಲ್ಲಿ ಯಕ್ಷಗಾನ ಕಲೆಯ ಏರುಪದಗಳ ರೌದ್ರರಸಗಳನ್ನು ನೋಡಬಹುದು. ಮೆಸ್ಸಿಯ ಆಟ ಅಂದ್ರೆ ಸುಲಲಿತವಾದ ಕಲೆಯ ದರ್ಶನ. ಆದ್ರೆ ಕ್ರಿಸ್ಟಿಯ ಆಟ ಅಂದ್ರೆ ಮೈದಾನದಲ್ಲಿ ಶಕ್ತಿಯ ಪ್ರದರ್ಶನ. ಮೆಸ್ಸಿ ಮೈದಾನದಲ್ಲಿ ಜಾಸ್ತಿ ಓಡಾಡಲ್ಲ. ಆದ್ರೆ ಕ್ರಿಸ್ಟಿ ಹಾಗಲ್ಲ. ಅಂಗಣದಲ್ಲಿ ಮಿಂಚಿನ ಸಂಚಾರವಿರುತ್ತದೆ. ಮೆಸ್ಸಿಯ ಕಾಲಿನ ಸ್ಪರ್ಶಕ್ಕೆ ಕಾಲ್ಚೆಂಡು ಕೂಡ ನಾಚಿ ನೀರಾಗುತ್ತದೆ. ಆದ್ರೆ ಕ್ರಿಸ್ಟಿಯ ಕಾಲಿಂದ ಒದೆ ತಿನ್ನುವ ಚೆಂಡು ಗಲಿಬಿಲಿಗೊಂಡು ಗೋಲು ಬಲೆಯ ದಾರಿ ಹುಡುಕುತ್ತಿರುತ್ತದೆ. ಮೆಸ್ಸಿ ಚೆಂಡಿನ ಜೊತೆಗೆ ಪ್ರೀತಿಯ ಸಂಭಾಷಣೆ ನಡೆಸಿದ್ರೆ, ಕ್ರಿಸ್ಟಿ ಚೆಂಡಿಗೆ ಆಜ್ಞೆ ಮಾಡುತ್ತಾನೆ. ಮೆಸ್ಸಿಯ ಆಟದಲ್ಲಿ  ಸೊಬಗಿನ ಕಲಾತ್ಮಕತೆ ಇದ್ರೆ, ಕ್ರಿಸ್ಟಿಯಾನೋ ರೋನಾಲ್ಡೊ ಆಟದಲ್ಲಿ ಸಾಮಥ್ರ್ಯದ ಪರಾಕ್ರಮವಿದೆ.

ಫುಟ್‍ಬಾಲ್ ಲೀಗ್‍ನಲ್ಲಿ ಅಪ್ರತಿಮ ಸಾಹಸ ಮೆರೆದಿರುವ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ಇದೀಗ ಫಿಫಾ ವಿಶ್ವಕಪ್‍ನಲ್ಲೂ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ಇಬ್ಬರು ಕೂಡ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಫಿಫಾ ವಿಶ್ವಕಪ್‍ನಲ್ಲಿ ಗರಿಷ್ಠ ಗೋಲು ದಾಖಲಿಸಿದ್ದ ಹಿರಿಮೆ ಮೆಸ್ಸಿಯದ್ದು. ಅದೇ ರೀತಿ ಆಡಿರುವ ಆರು ವಿಶ್ವಕಪ್‍ನಲ್ಲೂ ಗೋಲು ಗಳಿಸಿದ್ದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಕ್ರಿಸ್ಟಿಯಾನೋ ರೋನಾಲ್ಡೊನದ್ದು. ಫಿಫಾ ವಿಶ್ವಕಪ್ ಸೇರಿದಂತೆ ಮೆಸ್ಸಿ ಹಲವು ಟ್ರೋಫಿ, ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾನೆ. ಆದ್ರೆ ಕ್ರಿಸ್ಟಿಗೆ ಒಂದು ಕೊರಗು ಕಾಡುತ್ತಲೇ ಇದೆ. ಮೆಸ್ಸಿಗೆ ಸರಿಸಾಟಿಯಾಗಿ ಅನೇಕ ಪ್ರಶಸ್ತಿ, ಟ್ರೋಫಿ ಗೆದ್ದುಕೊಂಡ್ರೂ ಫಿಫಾ ವಿಶ್ವಕಪ್ ಟ್ರೋಫಿಯೊಂದು ಕ್ರಿಸ್ಟಿಯಾನೋ ಹೆಸರಿಗೆ ಅಂಟಿಕೊಂಡಿಲ್ಲ. 41ರ ಹರೆಯದಲ್ಲೂ ಫಿಟ್ ಆಂಡ್ ಫೈನ್ ಆಗಿರುವ ಕ್ರಿಸ್ಟಿಯಾನೊ ಮೊದಲ ಫಿಫಾ ವಿಶ್ವಕಪ್ ಗೆಲ್ಲುವ ತವಕದಲ್ಲಿದ್ರೆ, 39ರ ಹರೆಯದ ಮೆಸ್ಸಿ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ  ಬಯಕೆಯಲ್ಲಿದ್ದಾನೆ.

ಅಂದ ಹಾಗೇ, ಮಹಾಭಾರತ ಯುದ್ಧದಲ್ಲಿ ಕರ್ಣ ಗೆಲ್ಲದಿರಬಹುದು. ಆದ್ರೆ ತನ್ನ ಸ್ವಂತ ಬಲ ಮತ್ತು ಸಾಮಥ್ರ್ಯದಿಂದ ತನಗೆ ಬೇಕಾದುದನ್ನು ಕರ್ಣ ಪಡೆದುಕೊಂಡಿದ್ದ. ಹಾಗೆ ಕ್ರಿಸ್ಟಿಯಾನೋ ರೋನಾಲ್ಡೊ ಕೂಡ. ಫಿಫಾ ವಿಶ್ವಕಪ್ ಗೆದ್ದಿಲ್ಲ ಬಿಟ್ರೆ (ಈ ಬಾರಿ ನೋಡೋಣ) ತಾನು ಏನು ಸಾಧಿಸಬೇಕೋ ಅದನ್ನು ಸಾಧಿಸಿದ್ದಾನೆ. ಕ್ರಿಸ್ಟಿ ಪಾಲಿಗೆ ಕಠಿಣ ಪರಿಶ್ರಮ, ಸ್ವಸಾಮಥ್ರ್ಯವೆ ಕವಚಕುಂಡಲವಾಗಿದೆ.

ಆದ್ರೆ ಮೆಸ್ಸಿ ಹಾಗಲ್ಲ. ನೈಜ ಪ್ರತಿಭೆಯಿಂದಲೇ ಎಲ್ಲವನ್ನೂ ಪಡೆದುಕೊಂಡಿದ್ದಾನೆ. ಹಕ್ಕಿಯ ಕಣ್ಣಿಗೆ ಬಾಣ ಬಿಡುವ ಅರ್ಜುನನಂತೆ ಎದುರಾಳಿ ಕೋಟೆಯ ಸಣ್ಣ ಜಾಗವನ್ನು ಗುರುತಿಸಿ ಗೋಲು ಹೊಡೆಯುವ ಕಲೆಯೇ ಮೆಸ್ಸಿಗೆ ಶ್ರೀರಕ್ಷೆಯಾಗಿದೆ.

ಒಟ್ಟಿನಲ್ಲಿ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ಆಧುನಿಕ ಫುಟ್‍ಬಾಲ್‍ನಲ್ಲಿ ಸುವರ್ಣಯುಗ ಕಟ್ಟಿರುವ ಸರ್ವಶ್ರೇಷ್ಠ ಆಟಗಾರರು. ಹಾಗಾಗಿಯೇ ಸಿಆರ್ ಮತ್ತು ಎಲ್‍ಎಂ ಒಂದೇ ನಾಣ್ಯದ ಎರಡು ಮುಖಗಳು. ..!

ಸನತ್ ರೈ

saakshatv.com

 

ShareTweetSendShare
Join us on:

Related Posts

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

by Shwetha
June 24, 2026
0

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ಪ್ರಕರಣವು ರಾಜ್ಯ ಬಿಜೆಪಿಯಲ್ಲಿ ದೊಡ್ಡ ಮಟ್ಟದ ರಾಜಕೀಯ ಭೂಕಂಪಕ್ಕೆ ಕಾರಣವಾಗಿದೆ. ಇದು ಕೇವಲ ಒಂದು ಸೋಲಲ್ಲ, ಬದಲಾಗಿ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಯೋಜನೆಯಲ್ಲಿ ಎಡವಟ್ಟು; ಮಹಾಲೇಖಪಾಲರ ಕಚೇರಿಯಿಂದ ಸ್ಪಷ್ಟನೆ ಕೋರಿದ ಸರ್ಕಾರ

by Shwetha
June 24, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಹಲವು ಲೋಪದೋಷಗಳು ಪತ್ತೆಯಾಗಿದ್ದು, ಈ ಕುರಿತು ಮಹಾಲೇಖಪಾಲರ ಕಚೇರಿ (CAG) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಲಿಖಿತ ಸ್ಪಷ್ಟನೆ...

ಈಶ್ವರಪ್ಪಗೆ ಮಾನಸಿಕ ಸ್ಥಿಮಿತ ತಪ್ಪಿದೆ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ: ಭ್ರಷ್ಟಾಚಾರದ ಇತಿಹಾಸ ಇಟ್ಟುಕೊಂಡು ಬೇರೆಯವರನ್ನು ಟೀಕಿಸಬೇಡಿ – ಶಿವರಾಮ್ ಹೆಬ್ಬಾರ್ ಆಕ್ರೋಶ

ಈಶ್ವರಪ್ಪಗೆ ಮಾನಸಿಕ ಸ್ಥಿಮಿತ ತಪ್ಪಿದೆ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ: ಭ್ರಷ್ಟಾಚಾರದ ಇತಿಹಾಸ ಇಟ್ಟುಕೊಂಡು ಬೇರೆಯವರನ್ನು ಟೀಕಿಸಬೇಡಿ – ಶಿವರಾಮ್ ಹೆಬ್ಬಾರ್ ಆಕ್ರೋಶ

by Shwetha
June 24, 2026
0

ಶಿರಸಿ: ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣವಾಗಿ ರಾಜಕೀಯ ದಿವಾಳಿತನಕ್ಕೆ ತಲುಪಿದ್ದಾರೆ ಎಂದು ಶಾಸಕ ಶಿವರಾಮ್ ಹೆಬ್ಬಾರ್...

ಡಿಕೆಶಿ ತಂತ್ರಕ್ಕೆ ಬಿಜೆಪಿ ತತ್ತರ: ಕೈ ಅಭ್ಯರ್ಥಿ ಗೆಲುವಿನ ಹಿಂದೆ ಅಡಗಿದೆಯೇ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ; ವಿಜಯೇಂದ್ರ ಮತ್ತು ಅಶೋಕ ನಾಯಕತ್ವಕ್ಕೆ ಎದುರಾಯ್ತು ಗಂಡಾಂತರ!

ಅಡ್ಡಮತದಾನ ವಿಚಾರ; ಧರ್ಮಸ್ಥಳದಲ್ಲಿ ಸಭೆ ಇಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ: ಆರ್. ಅಶೋಕ್

by Shwetha
June 24, 2026
0

ವಿಧಾನ ಪರಿಷತ್ (MLC) ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನದ ವಿಚಾರವಾಗಿ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ...

CM ಪಟ್ಟದ ಫೈಟ್ : 3 ವರ್ಷದ ಅಭಿವೃದ್ಧಿ ಮಂತ್ರ ಪಠಿಸಿದ ಮುಖ್ಯಮಂತ್ರಿ

ರಾಜೀನಾಮೆಯ ಬಳಿಕ ವಿಶ್ರಾಂತಿಗೆ ಮಾಜಿ ಸಿಎಂ ಸಿದ್ದರಾಮಯ್ಯ; ಕೇರಳದ ರೆಸಾರ್ಟ್‌ಗೆ ಭೇಟಿ

by Shwetha
June 24, 2026
0

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ತಮ್ಮ ಆಪ್ತರೊಂದಿಗೆ ಕೇರಳ ಪ್ರವಾಸ ಕೈಗೊಂಡಿದ್ದಾರೆ. ಮೂಲಗಳ ಪ್ರಕಾರ, ಸಿದ್ದರಾಮಯ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram