Samantha : ನಾಗಚೈತನ್ಯ ಕುಟುಂಬಕ್ಕೆ ಮದುವೆ ಸೀರೆ ವಾಪಸ್ ಕೊಟ್ಟ ಸಮಂತಾ..!!
ಹೈದ್ರಾಬಾದ್ : ಕಳೆದ ವರ್ಷ ಅಕ್ಟೋಬರ್ ವೇಳೆಗೆ ಟಾಲಿವುಡ್ ನ ಸ್ಟಾರ್ ಜೋಡಿ ಎನಿಸಿಕೊಂಡಿದ್ದ ಸಮಂತಾ ನಾಗಚೈತನ್ಯ ಅವರು ಡಿವೋರ್ಸ್ ಪಡೆಯುವ ಮೂಲಕ ತಮ್ಮ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು.. ಡಿವೋರ್ಸ್ ನಂತರ ಇಬ್ಬರೂ ತಮ್ಮ ತಮ್ಮ ವೃತ್ತಿ ಜೀವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿದ್ದಾರೆ.
ಇಬ್ಬರೂ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿದ್ದಾರೆ.. ಆದ್ರೆ ಆಗಾಗ ಸೋಷಿಯಲ್ ಮೀಡಿಯಾದಲ್ಲೀ ಇಬ್ಬರೂ ತಮ್ಮ ಡಿವೋರ್ಸ್ ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ.. ಇದೀಗ ಸಮಂತಾ ನಾಗಚೈತನ್ಯ ಕುಟುಂಬ ತಮಗೆ ಮದುವೆಗೆ ನೀಡಿದ್ದ ದುಬಾರಿ ಬೆಲೆಯ ರೇಷ್ಮೆ ಸೀರೆಯನ್ನ ವಾಪಸ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಅಲ್ಲದೇ ಇದರಿಂದಾಗಿ ಅಕ್ಕಿನೇನಿ ಕುಟುಂಬಕ್ಕೆ ಇರಿಸು ಮುರಿಸು ಉಂಟಾಗಿದೆ ಎಂಬ ಚರ್ಚೆಗಳಾಗುತ್ತಿದೆ.
ಡಿವೋರ್ಸ್ ಬಳಿಕ ಸಮಂತಾ ಸಿನಿಮಾ ಇಂಡಸ್ಟ್ರಿಯಲ್ಲಿ ಹೈಪರ್ ಆಕ್ಟೀವ್ ಆಗಿದ್ದಾರೆ.. ಸದ್ಯದಲ್ಲೇ ಸಮಂತಾ ಬಾಲಿವುಡ್ ಗೆ ಹಾರಲಿದ್ದಾರೆ.. ಅಲ್ಲದೇ ಹಾಲಿವುಡ್ ಸಿನಿಮಾವೊಂದನ್ನೂ ಒಪ್ಪಿಕೊಂಡಿದ್ದಾರೆ.. ಇದೆಲ್ಲದರ ನಡುವೆ ಅವರ ಶಾಕುಂತಲಂ ಸಿನಿಮಾ ರಿಲೀಸ್ ಆಗಬೇಕಿದೆ.. ಅಂದ್ಹಾಗೆ ಕಳೆದ ವರ್ಷ ಡಿಸೆಂಬರ್ 17 ರಂದು ರಿಲೀಸ್ ಆಗಿ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಪುಷ್ಪ ಸಿನಿಮಾದಲ್ಲಿ ಸಮಂತಾ ಅವರು ಐಟಂ ಹಾಡಿಗೆ ಹೆಕ್ಕೆ ಹಾಕಿದ್ದರು.. ಈ ಹಾಡು , ಸಮಂತಾ ಸ್ಟೆಪ್ಸ್ ಸಹ ಸಿನಿಮಾದ ಹೈಲೇಟ್ ಆಗಿತ್ತು.. ಅಂದ್ಹಾಗೆ ಸಮಂತಾ ಕೇವಲ ಈ ಹಾಡೊಂದಕ್ಕೆ ಹೆಜ್ಜೆ ಹಾಲು ಸುಮಾರು 1 ಕೋಟಿ 50 ಲಕ್ಷ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ..









