Five states election | ಚುನಾವಣೆಯಲ್ಲಿ ಕೇಸರಿಯದ್ದೇ ಹವಾ
ಹೈದರಾಬಾದ್ : ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್, ಮಣಿಪುರ ವಿಧಾನಸಭಾ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಉತ್ತರ ಪ್ರದೇಶದಲ್ಲಿ ಮತ್ತೆ ಯೋಗಿ ಹವಾ ಮುಂದುವರೆದಿದ್ದರೇ, ಉತ್ತರಾಖಂಡ್ ಕೇಸರಿ ಘರ್ಜಿಸಿದೆ.
ಪಂಜಾಬ್ ಜನರು ಆಮ್ ಆದ್ಮಿ ಪಾರ್ಟಿಯನ್ನ ಅಪ್ಪಿಕೊಂಡಿದ್ದಾರೆ. ಮಣಿಪುರ ಮತ್ತು ಗೋವಾದಲ್ಲಿ ರಿಸಲ್ಟ್ ಅತಂತ್ರವಾಗಿದೆ.
ಅಂತಂತ್ರ ರಿಸ್ಟಲ್ ಬಂದಿರುವ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಪಡೆಯೋದು ಪಕ್ಕಾ ಎನ್ನಲಾಗುತ್ತಿದೆ..
ಇದರೊಂದಿಗೆ ಪಂಚ ರಾಜ್ಯಗಳ ಚುನಾವಣೆ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ರಣಕೇಕೆ ಹಾಕಿದೆ.
ಸದ್ಯದ ಟ್ರೆಂಡ್ ಹೀಗಿದೆ
ಉತ್ತರ ಪ್ರದೇಶದಲ್ಲಿ 266 ಸ್ಥಾನಗಳಲ್ಲಿ ಬಿಜೆಪಿ, ಸಮಾಜವಾದಿ ಪಕ್ಷ 132 ಹಾಗೂ ಬಿಎಸ್ ಪಿ 2 ಕಾಂಗ್ರೆಸ್ 1 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.
ಉತ್ತರಾಖಂಡದಲ್ಲಿ ಬಿಜೆಪಿ 48, ಕಾಂಗ್ರೆಸ್18 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.
ಪಂಜಾಬ್ನಲ್ಲಿ ಕಾಂಗ್ರೆಸ್ 19, ಎಎಪಿ 91, ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆಯಲಿದೆ.
ಗೋವಾದಲ್ಲಿ ಬಿಜೆಪಿ 20, ಕಾಂಗ್ರೆಸ್ 11 ಸ್ಥಾನದಲ್ಲಿ ಮುನ್ನಡೆಯಲಿದೆ.
ಮಣಿಪುರದಲ್ಲಿ ಬಿಜೆಪಿ 29, ಕಾಂಗ್ರೆಸ್ 10 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿವೆ.
Five states election BJP wins in UP Goa Manipur and Uttarakhand









