Ukraine : ಉಕ್ರೇನ್ ನಲ್ಲಿ ಹೊಸ 4 ನಾಲ್ಕು ಮಾನವೀಯ ಕಾರಿಡಾರ್ ಗಳು…
ರಷ್ಯಾ ದಾಳಿಯಿಂದಾಗಿ ತತ್ತರಿಸಿಹೋಗಿರುವ ಉಕ್ರೇನ್ ನಲ್ಲಿ ಹೊಸದಾಗಿ ಮಾನವೀಯ ಕಾರಿಡಾರ್ಗಳನ್ನು ತೆರೆಯಲಾಗುವುದು ಎಂದು ಉಕ್ರೇನ್ ಸರ್ಕಾರ ಹೇಳಿರುವುದಾಗಿ ವರದಿಯಾಗಿದೆ.
ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಒಟ್ಟು 10 ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮವನ್ನು ಉಕ್ರೇನ್ ಎದುರು ನೋಡುತ್ತಿದೆ ಎಂದು ಕೂಡ ವರದಿಯಾಗಿದೆ.
ಇನ್ನೂ ನಾವು ಟ್ರೊಸ್ಟಿನೆಟ್ಸ್, ಕ್ರಾಸ್ನೋಪಿಲ್ಯಾ ಹಾಗೂ ಸುಮಿ ನಗರಗಳಿಂದ ಪೊಲ್ಟಾವಾ ನಗರದ ಕಡೆಗೆ ಮಾನವೀಯ ಕಾರಿಡಾರ್ಗಳನ್ನು ತೆರಯಲಿದ್ದೇವೆ,
ಎಂದು ಉಕ್ರೇನ್ ಉಪ ಪ್ರಧಾನಿ ಇರ್ಯಾನ್ ವೆರೆಶ್ಚುಕ್ ಹೇಳಿರುವುದಾಗಿ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮರಿಯುಪೋಲ್, ವೊಲ್ನೊವಾಖಾ, ಇಝಿಯುಮ್, ಬುಕಾ, ಬೊರೊದ್ಯಾಂಕ, ಇರ್ಪಿನ್ ಮತ್ತು ಹೊಸ್ಟೊಮೆಲ್ ನಗರಗಳಿಂದಲೂ ಕಾರಿಡಾರ್ ಕಾರ್ಯಾಚರಿಸಲಿವೆ ಎಂದೂ ಇರ್ನಾನ್ ತಿಳಿಸಿದ್ದಾರೆ.