UP Election | “ಟೂಲ್ ಕಿಟ್” ಅಪಪ್ರಚಾರ ಭೇದಿಸಿದ ಯೋಗಿ
ಬೆಂಗಳೂರು : ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ಪ್ರಾಯೋಜಿತ “ಟೂಲ್ ಕಿಟ್” ಅಪಪ್ರಚಾರವನ್ನು ಭೇದಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.
ಉತ್ತರ ಪ್ರದೇಶದ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಪ್ರಚಂಡ ಗೆಲುವು ದಾಖಲಿಸಿದೆ. ಬರೋಬ್ಬರು 270ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಇತ್ತ ಸಮಾಜವಾದಿ ಪಾರ್ಟಿ 130 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸೋದು ಪಕ್ಕಾ ಆಗಿದೆ. ಯೋಗಿ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಲಿದೆ.
ಇನ್ನು ಉತ್ತರ ಪ್ರದೇಶದ ಫಲಿತಾಂಶದ ಬಗ್ಗೆ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಕಾಳೆಲೆದಿದೆ.
ಉತ್ತರ ಪ್ರದೇಶದ ಚುನಾವಣೆಯುದ್ದಕ್ಕೂ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಯೋಜಿತ ಅಪಪ್ರಚಾರ ನಡೆಸಿತು. ಆದರೆ ರಾಷ್ಟ್ರೀಯವಾದ ಹಾಗೂ ಅಭಿವೃದ್ಧಿ ಪಥದಲ್ಲಿ ದೃಢವಾದ ಹೆಜ್ಜೆ ಇಟ್ಟ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ಪ್ರಾಯೋಜಿತ “ಟೂಲ್ ಕಿಟ್” ಅಪಪ್ರಚಾರವನ್ನು ಭೇದಿಸಿದ್ದಾರೆ.
ಉತ್ತರ ಪ್ರದೇಶದ ಇತಿಹಾಸದಲ್ಲಿ ಅಧಿಕಾರದಲ್ಲಿದ್ದ ಪಕ್ಷ ಮರಳಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂಬ ರಾಜಕೀಯ ಪಂಡಿತರ ತರ್ಕ ಈಗ ಸುಳ್ಳಾಗಿದೆ.ಸರ್ಕಾರವನ್ನು ಮುನ್ನಡೆಸುವವರು ದೃಢವಾಗಿ ಜನಪರವಾಗಿದ್ದರೆ ಗೆಲುವನ್ನು ಯಾರಿಂದಲೂ ತಡೆಯಲಾಗುವುದಿಲ್ಲ.ಇದು ಉತ್ತರಾಖಂಡ, ಮಣಿಪುರ, ಗೋವಾ ಫಲಿತಾಂಶಕ್ಕೂ ಅನ್ವಯಿಸುತ್ತದೆ ಎಂದು ಬಿಜೆಪಿ ಬರೆದುಕೊಂಡಿದೆ.
up-election 2022-result karnataka bjp tweet









