ಗದೆ ಹಿಡಿದು ಕುರುಕ್ಷೇತ್ರ ಭೀಮನ ಡೈಲಾಗ್ ಹೊಡೆದ MLA ಶಿವಲಿಂಗೇಗೌಡ್ರು…
ಪೌರಾಣಿಕ ನಾಟಕದ ಉದ್ಘಾಟನೆಗೆ ತೆರಳಿದ್ದ ಹಾಸನ ಜಿಲ್ಲೆಯ ಅರಸೀಕೆರೆ ಶಾಸಕ ಶಿವಲಿಂಗೇಗೌಡ್ರು ಕುರುಕ್ಷೇತ್ರ ನಾಟಕದ ಡೈಲಾಗ್ ಹೊಡೆದು ಜನರನ್ನ ರಂಜಿಸಿದ್ದಾರೆ.
ಹಾಸನದ ಅರಸೀಕೆರೆ ತಾಲೂಕಿನ ಪಡುವನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ನಡೆದ ನಾಟಕದಲ್ಲಿ ಪೌರಾಣಿಕ ನಾಟಕದ ಭೀಮನ ಪಾತ್ರ ಡೈಲಾಗ್ ಹೊಡೆದಿದ್ದಾರೆ. ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ರಿಂದ ಭೀಮನ ಪಾತ್ರದ ಡೈಲಾಗ್ ಹಾಗು ಹಾಡಿಗೆ ಜನರು ಫಿದಾ ಆಗಿದ್ದಾರೆ. ಕೈಯಲ್ಲಿ ಗದೆ ಹಿಡಿದು ಕೌರವರ ಸಂಹಾರ ಪ್ರತಿಜ್ಞೆ ಮಾಡೋ ಸನ್ನಿವೇಶದ ಡೈಲಾಗ್ ಹಾಗು ಹಾಡು ಹೇಳಿ ಮಿಂಚಿದ್ದಾರೆ.
ಹಳೆಯ ದಿನಗಳನ್ನ ಶಾಸಕರು ಮೆಲುಕು ಹಾಕಿಕೊಂಡಿದ್ದಾರೆ. ಸದನದಲ್ಲಿ ತಮ್ಮ ಸ್ವಾರಸ್ಯಕರ ಮಾತಿನಿಂದ ಎಲ್ಲರ ಗಮನ ಸೆಳೆಯುವ ಶಾಸಕರು ಈಗ ಕೈಯಲ್ಲಿ ಗದೆ ಹಿಡಿದು ಸದನಕ್ಕೂ ಸೈ ನಾಟಕಕ್ಕೂ ಸೈ ಎಂದಿದ್ದಾರೆ. . ಶಾಸಕರ ಅಭಿನಯಕ್ಕೆ ಸಿಳ್ಳೆ ಚಪ್ಪಾಳೆಗಳ ಮೂಲಕ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
MLA Shivalinga Gowdru hits the Kurukshetra Bhima Dialogue…








