Upendra : ಕ್ಯೂರಿಯಾಸಿಟಿಗೆ ತೆರೆ ಎಳೆದು , ಮತ್ತೆ ತಲೆಗೆ ಹುಳ ಬಿಟ್ಟ ಉಪ್ಪಿ..!!!
ಜನರ ತಲೆಗೆ ಹುಳ ಬಿಟ್ಟು ಡಿಫರೆಂಟ್ ಅನ್ನೋ ಟೈಟಲ್ ಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಕನ್ನಡ ನಟ , ನಿರ್ದೇಶಕ , ರಾಜಕಾರಣಿ ಅಂದ್ರೆ ಅವರು ಉಪೇಂದ್ರ. ಇತ್ತೀಚೆಗೆ ಉಪೇಂದ್ರ ಅವರು ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಜನರ ತಲೆಗೆ ಹುಳ ಬಿಟ್ಟು ಸೈಲೆಂಟ್ ಆಗಿದ್ದರು.. ಎರಡು ದಿನಗಳ ಹಿಂದೆ 11.03 : 12.46 ಇದನ್ನು ಸೇವ್ ಮಾಡ್ಕೊಳ್ಳಿ ಎಂದು ಟ್ವೀಟ್ ಮಾಡಿದ್ರದರು.. ಉಪ್ಪಿ ಅವರು ಈ ಟ್ವೀಟ್ ಮಾಡಿದ್ದೇ ತಡ ಅಭಿಮಾನಿಗಳು ಕ್ಯೂರಿಯಾಸಿಟಿ ಎಲ್ಲೆ ಮೀರಿತ್ತು..
ಇದಕ್ಕೆ ಇವತ್ತು ಉತ್ತರವೇನೋ ಸಿಕ್ಕಿದೆ.. ಆದ್ರೂ ಉತ್ತರ ಅರ್ಥವಾಗಿಲ್ಲ ಅನ್ನೋ ರೀತಿ ಇದೆ.. ಮತ್ತೆ ಅಭಿಮಾನಿಗಳನ್ನ ಉಪ್ಪಿ ಕನ್ಫ್ಯೂಸ್ ಮಾಡಿ ಹಾಕಿದ್ದಾರೆ. ಯಾವುದನ್ನೂ ನೇರವಾಗಿ ಹೇಳದ ಬುದ್ದಿವಂತ.. ಯಾವಾಗಲೂ ಜನರನ್ನ ಕನ್ಫ್ಯೂಸ್ ಮಾಡಿಸುವ ಅವರ ಇದೇ ಕ್ರೇಜ್ ಮುಂದುವರೆದಿದೆ.
‘11.03, 12:46 ಸೇವ್ ದಿಸ್ ಡೇಟ್’……. ಹೀಗೊಂದು ಮಸೇಜ್ ಕಳುಹಿಸಿ ಸೈಲೆಂಟ್ ಆಗಿದ್ದ ಉಪ್ಪಿ ಈ ತಮ್ಮ ಟಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನ ಹಂಚಿಕೊಂಡಿದ್ಧಾರೆ.. ಉಪ್ಪಿ ಟ್ವೀಟ್ ಹಿಂದಿನ ಮರ್ಮವೇನಿರಬಹುದು.. ಹೀಗ್ಯಾಕೆ ಟ್ವೀಟ್ ಮಾಡಿದ್ರು.. ರಾಜಕೀಯದ ಅಪ್ ಡೇಟಾನಾದ್ರೂ ಕೊಡ್ತಾರಾ..?? ಸಿನಿಮಾ ಅಪ್ ಡೇಟ್ ಏನಾದ್ರೂ ಸಿಗಬಹುದು ಅನ್ನೋ ಅಭಿಮಾನಿಗಳ ಪ್ರಶ್ನೆಗೆ ಉತ್ತರವಂತೂ ಸಿಕ್ಕಿದೆ..

ಇದು ಅವರ ಹೊಸ ಸಿನಿಮಾದ ಅಪ್ ಡೇಟ್ ಎನ್ನುವುದು ಗೊತ್ತಾಗಿದೆ. ಹೊಸ ಸಿನಿಮಾದ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ ಉಪ್ಪಿ. ಈ ಪೋಸ್ಟರ್ ನಲ್ಲಿ ಅವರು ಕುದುರೆ ಮೇಲೆ ಸವಾರಿ ಮಾಡುವ ಹೋರಾಟಗಾರನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಜನರ ತಲೆಕೆಡಿಸಿರುವುದು ಸಿನಿಮಾದ ಟೈಟಲ್… ಒಂದು ಸಿಂಬಲ್ ತೋರಿಸಲಾಗಿದೆ.. ಇದು ಯಾವ ಅರ್ಥದಲ್ಲಿದೆ.. ಜನ ಏನಂದುಕೊಳ್ಬೇಕು.. ಯು ಮತ್ತು ಐ ಅಂತ ಅರ್ಥ ಮಾಡಿಕೊಳ್ಬೇಕಾ ಇಲ್ಲ ಯಾವ ರೀತಿ ಹೇಳಬೇಕು ಎಂದು ಅರ್ಥವಾಗದೇ ಕನ್ಫ್ಯೂಸ್ ಆಗಿದ್ದಾರೆ.
ಪೋಸ್ಟರ್ ಜೊತೆಗೆ ‘ಚಿತ್ರರಂಗದಲ್ಲಿ ಉಪೇಂದ್ರ ಅನ್ನೋ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿಗ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಇನ್ನೂ ಈ ಪೋಸ್ಟರ್ ನೋಡಿದ್ರೆನೇ ಅರ್ಥವಾಗುತ್ತೆ ಇದು ಪ್ಯಾನ್ ಇಂಡಿಯಾ ಸಿನಿಮಾ ಅಂತ.. ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ಚಿತ್ರ ಮೂಡಿ ಬರಲಿದೆ. ಪೋಸ್ಟರ್ ನಲ್ಲಿ ಇಷ್ಟೂ ಭಾಷೆಗಳ ಪದಗಳಿದೆ.. ವಿಶೇಷ ಅಂದ್ರೆ ಈ ಸಿನಿಮಾ ಬೆಂಗಾಲಿಯಲ್ಲೂ ಬರುತ್ತಾ ಅನ್ನೋ ಕ್ಯೂರಿಯಾಸಿಟಿಯೂ ಮೂಡಿದೆ.. ಅಂದ್ಹಾಗೆ ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದ್ರೆ ಉಪ್ಪಿ ಅವರೇ ನಿರ್ದೇಶನದ ಜತೆ ನಟಿಸುತ್ತಿರುವುದು.. ಲಹರಿ ಫಿಲ್ಮಸ್ ಲಾಂಛನದ ಅಡಿಯಲ್ಲಿ ಸಿನಿಮಾ ಮೂಡಿ ಬರಲಿದೆ.








