ರಷ್ಯಾ-ಉಕ್ರೇನ್ ಮಧ್ಯೆ ಮಾತುಕತೆ ಸಕಾರಾತ್ಮಕ ಬದಲಾವಣೆ – Saaksha Tv
ರಷ್ಯಾ : ರಷ್ಯಾ ಮತ್ತು ಉಕ್ರೇನ್ ಮಧ್ಯೆ ಕಳೆದ 17 ದಿನಗಳಿಂದ ಯುದ್ಧ ನಡೆಯುತ್ತಿದ್ದು, ಎರಡು ದೇಶಗಳ ಮಧ್ಯೆ ಮಾತುಕತೆ ನಡೆಯುತ್ತಿದ್ದು, ಮಾತುಕತೆ ಸಕಾರಾತ್ಮಕ ಬದಲಾವಣೆ ಕಾಣುತ್ತಿದೆ.
ಟರ್ಕಿ ಮಧ್ಯಸ್ತಿಕೆಯಲ್ಲಿ ಮೊದಲನೆ ಸುತ್ತಿನ ಮಾತಕತೆ ನಡೆದಿದ್ದು, ನಮ್ಮ ಮತ್ತು ಉಕ್ರೇನ್ ದೇಶದ ನಿಯೋಗಗಳ ಮಧ್ಯೆ ನಿರಂತರವಾಗಿ ಮಾತುಕತೆಗಳು ನಡೆಯುತ್ತಿವೆ. ಇದರಿಂದಾಗಿ ಹಲವೆಡೆಗಳಲ್ಲಿ ಸಿಲುಕಿರುವ ನಾಗರಿಕರನ್ನು ರಕ್ಷಿಸಲು ಮಾನವ ಕಾರಿಡಾರ್ಗಳನ್ನು ರೂಪಿಸಲಾಗಿದೆ ಎಂದು ರಷ್ಯಾ ತನ್ನ ಮಿತ್ರರಾಷ್ಟ್ರವಾದ ಬೆಲಾರಸ್ಗೆ ಮಾಹಿತಿ ನೀಡಿದೆ.
ಅಲ್ಲದೇ ರಷ್ಯಾ ಉಕ್ರೇನಿ ಜನರನ್ನು ಏರ್ ಲಿಪ್ಟ್ ಮುಖಾಂತರ ತನ್ನ ದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಆಶ್ರಯ ನೀಡಲು ಮುಂದಾಗಿದ್ದು ಇದಕ್ಕೆ ಉಕ್ರೇನ್ ಜನರು ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೇ ಟರ್ಕಿ ಮಧ್ಯಸ್ತಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಉಕ್ರೇನ್ ವಿದೇಶಾಂಗ ಸಚಿವ ರಷ್ಯಾಕ್ಕೆ 24 ಗಂಟೆ ಕದನ ವಿರಾಮ ಘೋಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ರಷ್ಯಾ ಇದಕ್ಕೆ ಉತ್ತರ ನೀಡದೆ ತಟಸ್ಥವಾಗಿದ್ದಲ್ಲದೇ, ಉಕ್ರೇನ್ ಸೈನಿಕರಿಗೆ ನಿಶಸ್ತ್ರರಾಗುವಂತೆ ಸೂಚನೆ ನೀಡಿದೆ.








