ಬಾಗಲಕೋಟೆ : ಭಾನುವಾರದ ಮಧ್ಯಾಹ್ನದ ಕೋವಿಡ್-19 ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಬಾಕಿ ಉಳಿದ 313 ಸ್ಯಾಂಪಲ್ ಗಳ ಪೈಕಿ 91 ಸ್ಯಾಂಪಲ್ ಗಳ ವರದಿ ನೆಗಟಿವ್ ಬಂದಿದೆ. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ, ಜಿಲ್ಲೆಯಿಂದ ಮತ್ತೆ ಹೊಸದಾಗಿ 365 ಸ್ಯಾಂಪಲ್ ಗಳು ಪರೀಕ್ಷೆಗೆ ರವಾನೆಯಾಗಿದೆ. ಬಾಕಿ 222 ಹಾಗೂ ಹೊಸ 365 ಸೇರಿ ಒಟ್ಟು 587 ಸ್ಯಾಂಪಲಗಳ ವರದಿ ನಿರೀಕ್ಷೆಯಲ್ಲಿ ಇದ್ದೇವೆ.2465 ಜನ ಇನ್ಸ್ಟಿಟ್ಯೂಶನಲ್ ಕ್ವಾರಂಟೈನ್ ನಲ್ಲಿ ಇದ್ದಾರೆ. ಅವರ ಮೇಲೆ ನಿಗಾ ಇಡಲಾಗಿದೆ.
ಇಲ್ಲಿಯವರೆಗೆ 6029 ಸ್ಯಾಂಪಲ್ ಕಳುಹಿಸಲಾಗಿದೆ. ಒಟ್ಟು ನೆಗಟಿವ್ ಪ್ರಕರಣ 5335, ಪಾಜಿಟಿವ್ ಪ್ರಕರಣ 77, ಮೃತ ಪ್ರಕರಣ 1, ಕೋವಿಡ್-19 ನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 42 ಆಗಿದೆ. ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರು ಒಟ್ಟು 34 ಆಗಿದೆ.7 ಕಂಟೈನ್ ಮೆಂಟ್ ಝೋನ್ ಗಳು ಇದ್ದಾವೆ. 13 ಸ್ಯಾಂಪಲ್ ಗಳು ರಿಜೆಕ್ಟ್ ಆಗಿವೆ. ಜೊತೆಗೆ 14 ದಿನಗಳ ಇನ್ಸ್ಟಿಟ್ಯೂಶನ್ ಕ್ವಾರಂಟೈನ್ ನಿಂದ 305 ಬಿಡುಗಡೆಯಾಗಿದ್ದಾರೆ ಎಂದು ಹೇಳಿದರು.








