India v Sri Lanka 2nd Test | ಭಾರತದ ಬೆಂಕಿ ಬೌಲಿಂಗ್, ಲಂಕಾ 109 ರನ್ ಕ್ಕೆ ಆಲೌಟ್
ಶ್ರೀಲಂಕಾ ವಿರುದ್ಧದ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಲಂಕಾ ಮೇಲೆ ಬಿಗಿ ಹಿಡಿತ ಸಾಧಿಸಿದೆ.
ಚಿನ್ನಸ್ವಾಮಿ ಅಂಗಳದಲ್ಲಿ ಭಾರತೀಯ ಬೌಲರ್ ಗಳು ಲಂಕಾ ಬ್ಯಾಟರ್ ಗಳ ಮೇಲೆ ಸವಾರಿ ಮಾಡಿದ್ದಾರೆ.
ಪರಿಣಾಮ ಶ್ರೀಲಂಕಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 109 ರನ್ ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಟೀಂ ಇಂಡಿಯಾಗೆ 143 ರನ್ ಗಳ ಲೀಡ್ ಸಿಕ್ಕಿದೆ.
ಶ್ರೀಲಂಕಾ ತಂಡ ಆರು ವಿಕೆಟ್ ಕಳೆದುಕೊಂಡು 86 ರನ್ ಗಳಿಂದ ಎರಡನೇ ದಿನದಾಟ ಆರಂಭಿಸಿತ್ತು.
ಮೊದಲ ದಿನವೇ ಲಂಕಾ ಬ್ಯಾಟಿಂಗ್ ಬೆನ್ನೆಲುಬನ್ನ ಮುರಿದ್ದಿದ್ದ ಟೀಂ ಇಂಡಿಯಾ ಬೌಲರ್ ಗಳು ಇಂದು ಲಂಕಾ ಬಾಲಂಗೋಚಿಗಳನ್ನು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲೇ ಇಲ್ಲ. ಏಂಜೆಲೊ ಮ್ಯಾಥ್ಯೂಸ್ ಲಂಕಾ ಪರ 43 ರನ್ ಗಳಿಸಿದರು.
ಇತ್ತ ಭಾರತದ ಪರ ವೇಗಿ ಜಸ್ಪ್ರಿತ್ ಬುಮ್ರಾ ಐದು ವಿಕೆಟ್ ಪಡೆದು ಲಂಕಾ ಸಂಹಾರ ಮಾಡಿದರು. ಅಶ್ವಿನ್, ಶಮಿ ತಲಾ ಎರಡು ವಿಕೆಟ್ ಪಡೆದಿದ್ದಾರೆ.
ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದಿದ್ದಾರೆ.
ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 252 ರನ್ ಗಳಿಗೆ ಆಲೌಟ್ ಆಗಿತ್ತು.
ಭಾರತದ ಪರ ಶ್ರೇಯಸ್ ಅಯ್ಯರ್ 92 ರನ್ ಗಳಿಸಿದ್ದರು. ಸದ್ಯದ ಪರಿಸ್ಥಿತಿ ನೋಡಿದ್ರೆ ಈ ಪಂದ್ಯವೂ ಕೂಡ ಮೂರು ಅಥವಾ ನಾಲ್ಕು ದಿನದಲ್ಲಿ ಮುಗಿಯುವ ಸಾಧ್ಯತೆಗಳಿವೆ.
india-v-sri-lanka-2nd-test-India lead by 144 runs









