ಉಕ್ರೇನ್ ದೇಶದಲ್ಲಿ ರಷ್ಯಾ ದಾಳಿಗೆ ಅಲ್ಲಿನ ಸ್ಥಿತಿ ಹೇಳ ತೀರದಂತಾಗಿದೆ.. ಎಲ್ಲಿ ನೋಡಿದ್ರು , ಸ್ಫೋಟ, ಕುಸಿದಿರುವ ಕಟ್ಟಡಗಳ ಅವಶೇಷಗಳು ಇವೇ ಕಾಣಿಸುತ್ತಿದ್ದು ಕಾದ ಕೆಂಡದಂತಾಗಿದೆ ಉಕ್ರೇನ್..
ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ 18ನೇ ದಿನವೂ ಮುಂದುವರಿದಿದೆ.
ಇದೀಗ ಉಕ್ರೇನ್‌ನಲ್ಲಿ ರಷ್ಯಾ ದಾಳಿಯ ತೀವ್ರತೆ ಹೆಚ್ಚಾಗಿರುವ ಬೆನ್ನಲ್ಲೇ ಭಾರತದ ರಾಯಭಾರ ಕಚೇರಿಯು ಉಕ್ರೇನ್ ನಿಂದ ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಗೊಳ್ಳಲಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾನುವಾರ ಈ ಕುರಿತು ಪ್ರಕಟಿಸಿದೆ.
ಉಕ್ರೇನ್‌ನ ಪಶ್ಚಿಮ ಭಾಗಗಳಲ್ಲೂ ದಾಳಿ ನಡೆಯುತ್ತಿದ್ದು, ಭದ್ರತಾ ಪರಿಸ್ಥಿತಿಯು ಕುಸಿಯುತ್ತಿದೆ. ಉಕ್ರೇನ್ ನಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಮುಂದಿನ ಬೆಳವಣಿಗೆಗಳನ್ನು ಆಧರಿಸಿ ಪರಿಸ್ಥಿತಿಯ ಬಗ್ಗೆ ಮರು ಅವಲೋಕನ ನಡೆಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.








