IPL 2022 : ಕಳೆದ ಬಾರಿ ಕಾಡಿದ ಆಟಗಾರರಿಗೆ ಸಿಎಸ್ ಕೆ ಮಣೆ
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಮೋಸ್ಟ್ ಸಕ್ಸಸ್ ಫುಲ್ ತಂಡ.
ಚೆನ್ನೈ ಇದುವರೆಗೆ 12 ಸೀಸನ್ಗಳಲ್ಲಿ 11 ಬಾರಿ ಪ್ಲೇ ಆಫ್ ತಲುಪಿ ದಾಖಲೆ ನಿರ್ಮಿಸಿದೆ.
ಎಂಎಸ್ ಧೋನಿ ನೇತೃತ್ವದ CSK ಹಾಲಿ ಚಾಂಪಿಯನ್ ಆಗಿ IPL-2022 ರಿಂಗ್ ಪ್ರವೇಶಿಸಲಿದೆ.
IPL-2022 ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯುವ ಆಟಗಾರರನ್ನು ಖರೀದಿಸಿದೆ.
ಆದಾಗ್ಯೂ, ಐಪಿಎಲ್-2021 ಋತುವಿನಲ್ಲಿ ತಮ್ಮ ವಿರುದ್ಧ ಉತ್ತಮವಾಗಿ ಆಡಿದ ಮೂವರು ಆಟಗಾರರಿಗೆ ಚೆನ್ನೈ ತಂಡ ಮಣೆ ಹಾಕಿದೆ.
ಮಾರ್ಚ್ 26 ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
01. ಶಿವಂ ದುಬೆ
ಚೆನ್ನೈ ಸೂಪರ್ ಕಿಂಗ್ಸ್ ಬಿಡ್ ನಲ್ಲಿ ಶಿವಂ ದುಬೆ ಅವರನ್ನು 4 ಕೋಟಿಗೆ ಖರೀದಿಸಿದೆ. ದುಬೆ ದೇಶೀಯ ಕ್ರಿಕೆಟ್ನಲ್ಲಿ ಮಿಂಚಿದ್ದಾರೆ.
ಕಳೆದ ಋತುವಿನಲ್ಲಿ ರಾಜಸ್ಥಾನ ಪರ ಆಡಿದ್ದ ದುಬೆ ಉತ್ತಮ ಪ್ರದರ್ಶನ ನೀಡಿದ್ದರು.
ದುಬೆ ಐಪಿಎಲ್-2021 ರಲ್ಲಿ ಸಿಎಸ್ ಕೆ ವಿರುದ್ಧ ಕೇವಲ 42 ಎಸೆತಗಳಲ್ಲಿ 64 ರನ್ ಗಳಿಸಿದ್ದರು.
02. ಆಡಮ್ ಮಿಲ್ನೆ
ಮೆಗಾ ಹರಾಜಿನಲ್ಲಿ ಆಡಮ್ ಮಿಲ್ನೆ ಅವರನ್ನು 1.9 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ಪಡೆದುಕೊಂಡಿದೆ.
ಈ ಕಿವೀಸ್ ಸ್ಪೀಡ್ ಸ್ಟರ್ ಕಳೆದ ವರ್ಷ ಮುಂಬೈ ಇಂಡಿಯನ್ಸ್ ಪರ ಆಡಿದ್ದರು.
ಯುಎಇ ಆತಿಥ್ಯ ವಹಿಸಿದ್ದ ಐಪಿಎಲ್ನ ಎರಡನೇ ಹಂತದಲ್ಲಿ ಚೆನ್ನೈ ವಿರುದ್ಧ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು.
03. ಕ್ರಿಸ್ ಜೋರ್ಡಾನ್
ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜೋರ್ಡಾನ್ ಅನ್ನು 3.6 ಕೋಟಿ ರೂಪಾಯಿಗೆ ಖರೀದಿಸಿದೆ.
ಕಳೆದ ಋತುವಿನಲ್ಲಿ ಜೋರ್ಡಾನ್ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಜೋರ್ಡಾನ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ CSK ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು.
4 ಓವರ್ ಬೌಲ್ ಮಾಡಿದ ಜೋರ್ಡಾನ್ 20 ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು.
ipl-2022-chennai-super-kings shivam dube adam milne