Sachin 100th century | ಸಚಿನ್ 100 ಶತಕಗಳ ಸವಿನೆನಪು
ಬಾಂಗ್ಲಾದೇಶ ವಿರುದ್ಧ ಸಚಿನ್ 100ನೇ ಶತಕ
ಡಾಕಾದಲ್ಲಿ 100ನೇ ಶತಕ ಸಿಡಿಸಿದ್ದ ಸಚಿನ್
ಟೆಸ್ಟ್ ನಲ್ಲಿ 51, ಏಕದಿನದಲ್ಲಿ 49 ಸೆಂಚೂರಿಗಳು
147 ಎಸೆತಗಳಲ್ಲಿ 114 ರನ್ 12 ಬೌಂಡರಿ, ಒಂದು 6
ಆ ಸೆಂಚೂರಿಗಾಗಿ ಇಡೀ ವಿಶ್ವಕ್ರಿಕೆಟ್ ಜಗತ್ತು ಜಾತಕ ಪಕ್ಷಿಯಂತೆ ಕಾದಿತ್ತು. ಆ ಸೆಂಚೂರಿಗಾಗಿ ಕ್ರಿಕೆಟ್ ಅಭಿಮಾನಿಗಳು ಸಿಕ್ಕ ಸಿಕ್ಕ ದೇವರುಗಳಿಗೆ ಕೈ ಮುಗಿಬಿದ್ದರು. ಆ ಸೆಂಚೂರಿ ಕ್ರಿಕೆಟ್ ಅಭಿಮಾನಿಗಳನ್ನ ತುದಿಗಾಲಿನಲ್ಲಿ ನಿಲ್ಲಿಸಿತ್ತು.
ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆಯನ್ನ ಪೂರೈಸುತ್ತಾ ಕ್ರಿಕೆಟ್ ದೇವರು 2012, ಬಾಂಗ್ಲಾದ ಡಾಕಾದಲ್ಲಿ ಮಹಾ ಶತಕದ ಸಂಭ್ರಮ ಆಚರಿಸಿಕೊಂಡರು.
ಹೌದು..! ಮಾರ್ಚ್ 16, 2012. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ನೂರನೇ ಅಂತರಾಷ್ಟ್ರೀಯ ಶತಕ ಸಿಡಿಸಿದ ದಿನ.
ಹೀಗಾಗಿ ಇಂದು ಸೋಶಿಯಲ್ ಮೀಡಿಯಾದಲ್ಲಿ ಸಚಿನ್ ದೇವರ ನಾಮಸ್ಮರಣೆ ಶುರುವಾಗಿದೆ.
ಸಚಿನ್ ರ ನೂರನೇ ಶತಕದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಸಂಭ್ರಮಿಸುತ್ತಿದ್ದಾರೆ.
ಅಂದಹಾಗೆ 2012ರ ಏಷ್ಯಾ ಕಪ್ ಭಾಗವಾಗಿ ಟೀಂಇಂಡಿಯಾ ಬಾಂಗ್ಲಾದೇಶಕ್ಕೆ ತೆರಳಿತ್ತು. ಆ ಹೊಸ ಲುಕ್ ನೊಂದಿಗೆ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಸಚಿನ್ ತೆಂಡುಲ್ಕರ್, ತನ್ನ ಕ್ರಿಕೆಟ್ ವೃತ್ತಿ ಜೀವನ ನೂರನೇ ಶತಕ ಬಾರಿಸಿದರು.
99ರನ್ ಗಳಿಸಿದ್ದಾಗ ಬಾಂಗ್ಲಾ ಆಲ್ ರೌಂಡರ್ ಶಕೀರ್ ಅಲ್ ಹಸನ್ ಬೌಲಿಂಗ್ ನಲ್ಲಿ ಸಚಿನ್ ಸಿಂಗಲ್ ಕದಿಯುತ್ತಿದ್ದಂತೆ, ಇಡೀ ಕ್ರೀಡಾಂಗಣ ಕುಣಿದುಕುಪ್ಪಳಿಸಿತ್ತು.
ಜೈಕಾರ, ಚಪ್ಪಾಳೆಯೊಂದಿಗೆ ಸಚಿನ್ ಸಚಿನ್ ನಾಮಸ್ಮರಣೆ ಜೋರಾಗಿತ್ತು. ಆ ಸೆಂಚೂರಿಗೆ ಇಂದಿಗೆ 10 ವರ್ಷಗಳ ಕಳೆದಿದೆ.









