ಕಲಬುರಗಿ : ರಾಜ್ಯದ ಬಿಜೆಪಿ ಸರ್ಕಾರ ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡಬೇಕು ಎಂದು ಆದೇಶ ಹೊರಡಿಸಿತ್ತು. ಆದರೆ ಬಿಜೆಪಿ ಶಾಸಕರಿಂದಲೇ ನಿಯಮ ಉಲ್ಲಂಘನೆಯಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಶಾಸಕ ಸುಭಾಷ್ ಆರ್ ಗುತ್ತೆದಾರ್ ರಿಂದ ಕರ್ಪ್ಯೂ ಉಲ್ಲಂಘನೆ ಆಗಿದೆ. ಭಾನುವಾರದ ಸಂಪೂರ್ಣ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಶಾಸಕರು ತೆರದ ಬಾವಿ ತೋಡುವುದಕ್ಕೆ ಗುದ್ದಲಿ ಪೂಜೆ ಮಾಡಿದ್ದಾರೆ. ಈ ಪೂಜೆಯಲ್ಲಿ 15 ರಿಂದ 20 ಜನ ಭಾಗಿಯಾಗಿದ್ದರು. ಅವರಲ್ಲಿ ಕೆಲವರು ಮಾಸ್ಕ್ ಧರಿಸಿದರೇ ,ಇನ್ನುಳಿದವರು ಮಾಸ್ಕ್ ಧರಿಸಿಲ್ಲ. ಅಲ್ಲದೆ ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ. ಪೂಜಾ ಕಾರ್ಯಕ್ರಮದಿಂದ ಅಧಿಕಾರಿಗಳು ದೂರ ಉಳಿದಿದ್ದಾರೆ. ಈ ಬಗ್ಗೆ ಅವರನ್ನು ಕೇಳಿದಾಗ ,ಅನ್ ಆಫಿಶಿಯಲ್ ಆಗಿ ಗುದ್ದಲಿ ಪೂಜೆ ಮಾಡಿದ್ದಾರೆ. ನಮಗೂ ಆ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ ಎಂದು ಗ್ರಾಮೀಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ಬಾವಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗಿದೆ. ಇದೊಂದು ರೀತಿಯ ಒಳ್ಳೆಯ ಕಾರ್ಯ, ಆದರೂ ಸಹ ಬಿಜೆಪಿ ಸರ್ಕಾರ ಕೊರೊನಾ ವಿರುದ್ದ ಹೋರಾಡಲು ಹೊರಡಿಸಿದ್ದ ಆದೇಶಕ್ಕೆ ಬಿಜೆಪಿ ಶಾಸಕರೇ ಕ್ಯಾರೆ ಅಂದಿಲ್ಲ. ಜವಾಬ್ದಾರಿ ಹೊತ್ತು ಆದೇಶ ಪಾಲಿಸಬೇಕಿದ್ದ ಶಾಸಕರಿಂದಲೇ ಕರ್ಪ್ಯೂ ನಿಯಮ ಉಲ್ಲಂಘನೆಯಾಗಿದ್ದೆ. ರಾಜ್ಯ ಸರ್ಕಾರ ನಿಯಮ ಉಲ್ಲಂಘಿಸಿದ ಶಾಸಕರ ವಿರುದ್ಧ ಏನು ಕ್ರಮ ಜರುಗಿಸುತ್ತೆ ಎಂಬುದು ಕಾದು ನೋಡಬೇಕಿದೆ.








