ವಾಷಿಂಗ್ ಮಷಿನ್ ತುಂಬಿದ ಲಾರಿಯಲ್ಲಿ ಅಕ್ರಮ ಮದ್ಯ ಪತ್ತೆ
ಕಾರವಾರ: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿಯನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ವಾಷಿಂಗ್ ಮಷಿನ್ ತುಂಬಿದ ಲಾರಿಯಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಲಾರಿ ಹಾಗೂ ಸ್ಪಿರಿಟ್ ವಶಕ್ಕೆ ಪಡೆದುಕೊಂಡಿದ್ದಾರೆ
ದಾಳಿಯಲ್ಲಿ 1 ಲಕ್ಷದ 80 ಸಾವಿರ ರೂ ಮೌಲ್ಯದ 2,625 ಲೀಟರ್ ಸ್ಪಿರಿಟ್ ಜಪ್ತಿ ಮಾಡಿದ್ದಾರೆ.
ಲಾರಿಯಲ್ಲಿ ಸುಮಾರು ಹತ್ತು ವಾಷಿಂಗ್ ಮಷಿನ್ಗಳಿದ್ದು, ಇದರ ಮದ್ಯದಲ್ಲಿ ಸ್ಪಿರಿಟ್ ತುಂಬಿದ ಕ್ಯಾನ್ಗಳನ್ನು ಇಡಲಾಗಿತ್ತು. ಈ ಲಾರಿ ಮಾಜಾಳಿಯ ಚೆಕ್ಪೋಸ್ಟ್ ಬಳಿ ಬರುತ್ತಿದ್ದಂತೆ ತಪಾಸಣೆ ನಡೆಸಿದ ಅಬಕಾರಿ ಸಿಬ್ಬಂದಿ ಅಕ್ರಮವನ್ನು ಬಯಲಿಗೆಳೆದಿದ್ದಾರೆ.








