B C Nagesh | ಶಿಕ್ಷಕರ ನೇಮಕಾತಿ: ಮೇ.21 ಅಧಿಸೂಚನೆ!
ಬೆಂಗಳೂರು : ‘ಶಿಕ್ಷಕ ಹುದ್ದೆ ನಿರೀಕ್ಷೆ’ಯಲ್ಲಿದ್ದವರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಮಾರ್ಚ್ 21ರಂದು ‘15,000 ಶಿಕ್ಷಕರ ನೇಮಕಾತಿ’ಗೆ ಅಧಿಸೂಚನೆ ಹೊರಬೀಳಲಿದೆ.
ಹೌದು..! ಶಿಕ್ಷಕರ ಉದ್ಯೋಗಾಕಾಂಕ್ಷಿಗಳು ಎದುರು ನೋಡುತ್ತಿದ್ದಂತ 15 ಸಾವಿರ ಶಿಕ್ಷಕರ ನೇಮಕಾತಿಗಾಗಿ ಮಾರ್ಚ್ 21 ರಂದು ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಇದರೊಂದಿಗೆ ಸಚಿವರು ಶಿಕ್ಷಕರ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯನ್ನು ನೀಡಿದ್ದಾರೆ.
ಮಾರ್ಚ್ 21ಕ್ಕೆ ಶಿಕ್ಷಕರ ನೇಮಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಮಾರ್ಚ್ 23 ರಿಂದ ಅರ್ಜಿ ಸಲ್ಲಿಸಬಹುದಾಗಿದೆ.

ಏಪ್ರಿಲ್ 22ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಮೇ ತಿಂಗಳ 21 ಮತ್ತು 22 ರಂದು ಸಿಇಟಿ ಪರೀಕ್ಷೆ ನಡೆಯಲಿದೆ.
ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟ್ವೀಟ್ ಮಾಡಿದ್ದಾರೆ.
ಸಚಿವರ ಟ್ವೀಟ್ ನಲ್ಲಿ 15,000 ಶಿಕ್ಷಕರ (6-8) ನೇಮಕಕ್ಕೆ ಮಾರ್ಚ್ 21ಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ.
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ – 23 ಮಾರ್ಚ್, 2022. ಆನ್‌ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 22 ಏಪ್ರಿಲ್ 2022. ಸಿಇಟಿ ಪರೀಕ್ಷೆ ದಿನಾಂಕ – ಮೇ ತಿಂಗಳ 21 ಮತ್ತು 22 ಎಂಬುದಾಗಿ ತಿಳಿಸಿದ್ದಾರೆ.
b-c-nagesh-Man avenges his humiliation by his teacher after stabbing her to death 30 years later








