ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ ಚಾಲಕರು-ನಿರ್ವಾಹಕರ ನಡುವೆ ಜಗಳ
ಮಂಗಳೂರು: ಸಮಯ ಪಾಲನೆ ವಿಚಾರಕ್ಕೆ ಸಂಬಂಧಿಸಿದಂತೆ ಚಾಲಕರು ಮತ್ತು ನಿರ್ವಾಹಕರು ಜಗಳವಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಸಮಯ ಪಾಲನೆ ವಿಚಾರಕ್ಕೆ ಖಾಸಗಿ ಎರಡು ಬಸ್‌ಗಳನ್ನು ರಸ್ತೆಯಲ್ಲೇ ಅಡ್ಡವಾಗಿ ನಿಲ್ಲಿಸಿದ್ದಾರೆ. ನಂತರ ಚಾಲಕರು ಮತ್ತು ನಿರ್ವಾಹಕರು ಪರಸ್ಪರ ಜಗಳವಾಡಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರಯಾಗಿದೆ. ಈ ಹಿನ್ನಲೆಯಲ್ಲಿ ಖಾಸಗಿ ಬಸ್ಸುಗಳ ನಾಲ್ವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುಣರಾಜ್ ಶೆಟ್ಟಿ, ಸ್ಟೀವನ್ ನೆಲ್ಸನ್ ನೊರೊನ್ಹಾ, ಧನರಾಜ್ ಮತ್ತು ಶರತ್ ಬಂಧಿತರು. ಲೇಡಿಹಿಲ್ ಬಸ್ ನಿಲ್ದಾಣದ ಬಳಿ ಶುಕ್ರವಾರ ಬಸ್‌ಗಳನ್ನು ಅಡ್ಡವಾಗಿ ಸಿಲ್ಲಿಸಿದ ಬಳಿಕ ಚಾಲಕರು ಮತ್ತು ನಿರ್ವಾಹಕರು ಬೈದಾಡಿಕೊಂಡು ತಳ್ಳಾಡಿದ್ದರು.








