SNAKE BITE | 500ಕ್ಕೂ ಹೆಚ್ಚು ಸಲ ಕಚ್ಚಿದ ಹಾವು!
ಮಹಾರಾಷ್ಟ್ರದ ಲಾತೂರಿನಲ್ಲಿ ನಡೆದ ಘಟನೆ
ಅನಿಲ್ ಎಂಬ ವ್ಯಕ್ತಿಗೆ 500 ಸಲ ಕಚ್ಚಿದ ಹಾವು
10 -15 ವರ್ಷಗಳಲ್ಲಿ 500 ಸಲ ಹಾವು ಕಡಿತ
ಅನಿಲ್ ಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
ಮಹಾರಾಷ್ಟ್ರ : ವ್ಯಕ್ತಿವೊಬ್ಬರಿಗೆ ಬರೋಬ್ಬರಿ 500 ಕ್ಕೂ ಹೆಚ್ಚು ಬಾರಿ ಹಾವುಗಳು ಕಚ್ಚಿರುವ ಘಟನೆ ಮಹಾರಾಷ್ಟ್ರದ ಲಾತೂರಿನಲ್ಲಿ ನಡೆದಿದೆ.
ಲಾತೂರು ಜಿಲ್ಲೆಯ ಔಸಾ ಪಟ್ಟಣದಲ್ಲಿ ವಾಸವಾಗಿರುವ ಅನಿಲ್ ಎಂಬ ವ್ಯಕ್ತಿಗೆ 500ಕ್ಕೂ ಅಧಿಕ ಸಲ ಹಾವುಗಳು ಕಚ್ಚಿವೆ. 45 ವರ್ಷದ ಅನಿಲ್ ತುಕಾರಾಂ ಗಾಯಕ್ವಾಡ್ ಕೃಷಿ ಕಾರ್ಮಿಕನಾಗಿದ್ದಾರೆ. ಕೂಲಿ ಕೆಲಸಕ್ಕಾಗಿ ಬೇರೆಯವರ ಜಮೀನುಗಳಿಗೆ ಹೋಗುತ್ತಾರೆ. ಈ ವೇಳೆ ಹೆಚ್ಚು ಜನರಿದ್ದರೂ ಅನಿಲ್ ಗೆ ವಿಷ ಸರ್ಪಗಳು ಕಚ್ಚಿವೆ.
ಕಳೆದ 10 ರಿಂದ 15 ವರ್ಷಗಳಿಂದ ಅನಿಲ್ ಹಾವುಗಳಿಂದ ಕಚ್ಚಿಸಿಕೊಂಡಿದ್ದಾರೆ. ಹೀಗಾಗಿ ಈತನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನು ಅನಿಲ್ ಗೆ ಚಿಕಿತ್ಸೆ ನೀಡುತ್ತಿರುವ ಡಾ.ಸಚ್ಚಿದಾನಂದ ರಣದಿವೆ ಈ ಬಗ್ಗೆ ಮಾತನಾಡಿ, ಗುಂಪು ಗುಂಪಾಗಿ ಜನರಿದ್ದರೂ ಈತನಿಗೆ ಹಾವುಗಳು ಕಚ್ಚುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ನಾನು ಅನಿಲ್ ಗೆ ಈವರೆಗೂ 150ಕ್ಕೂ ಹೆಚ್ಚು ಬಾರಿ ಚಿಕಿತ್ಸೆ ನೀಡಿದ್ದೇನೆ ಎಂದಿದ್ದಾರೆ.MORE THAN 500 TIMES SNAKE BITE A MAN IN LATUR









