Chamarajanagara | ರಾಜ್ಯದಲ್ಲಿ ಮತ್ತೊಂದು ಖಾಸಗಿ ಬಸ್ ಪಲ್ಟಿ !
ಚಾಮರಾಜನಗರದ ಮಂಗಲ ಕಾಮಗೆರೆ ಬಳಿ ಘಟನೆ
ಬಸ್ಸಿನಲ್ಲಿದ್ದ 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಗಾಯಾಳುವಿಗೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆ ಚಿಕಿತ್ಸೆ
ಮೈಸೂರಿನತ್ತ ತೆರಳುತ್ತಿದ್ದ ಮಹದೇಶ್ವರ ಬಸ್ ಪಲ್ಟಿ
ಚಾಮರಾಜನಗರ : ಖಾಸಗಿ ಬಸ್ ಪಲ್ಟಿಯಾಗಿ 10 ಮಂದಿ ಗಾಯಗೊಂಡಿರುವ ಘಟನೆ ಚಾಮರಾಜನಗರದ ಹಾನೂರು ತಾಲೂಕಿನ ಮಂಗಲ ಕಾಮಗೆರೆ ಮಾರ್ದಮಧ್ಯೆ ನಡೆದಿದೆ.
ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿನತ್ತ ತೆರಳುತ್ತಿದ್ದ ಮಹದೇಶ್ವರ ಬಸ್ ಮಂಗಲ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿದಿದೆ.
ಪರಿಣಾಮ ಬಸ್ ನಲ್ಲಿದ್ದ 10ಕ್ಕೂ ಹೆಚ್ಚು ಮಂದಿಗೆ ಗಂಭೀರವಾದ ಗಾಯಗಳಾಗಿವೆ.
ಇನ್ನು ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಕಾರ್ಯಪ್ರೌರುತ್ತರಾಗಿ ಗಾಯಾಳುಗಳನ್ನು ಆಸ್ಪತ್ರೆ ರವಾನಿಸಿದ್ದಾರೆ.
ಸದ್ಯ ಗಾಯಾಳುಗಳು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. BUS OVERTURNED IN CHAMARAJANAGARA









