ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೂ ಸಹ 4.0 ಹಂತ ಲಾಕ್ ಡೌನ್ ಅನ್ನು ಸರ್ಕಾರ ಸಡಿಲ ಮಾಡಿದೆ. ಜೊತೆಗೆ ಭಾನುವಾರ ಒಂದು ದಿನ ಮಾತ್ರ ಸಂಪೂರ್ಣ ಮಾಡಬೇಕು ಎಂಬ ಆದೇಶ ಹೊರಡಿಸಿತ್ತು. ಹಾಗಾಗಿ ನಿನ್ನೆ ನಡೆದ ಸಂಪೂರ್ಣ ಲಾಕ್ ಡೌನ್ ಯಶಸ್ವಿ ಆಗಿದೆ.
ಭಾನುವಾರ ನಡೆದ ಸಂಪೂರ್ಣ ಲಾಕ್ ಡೌನ್ ಯಾವ ರೀತಿ ಆಗಿದೆ ಎಂಬ ಮಾಹಿತಿಯನ್ನು ಸಿಎಂ ಯಡಿಯೂರಪ್ಪ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರಿಂದ ಪಡೆದುಕೊಂಡಿದ್ದಾರೆ. ಹಾಗಾಗಿ ಸಿಎಂ ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ರಾಜ್ಯದಲ್ಲಿ ಲಾಕ್ಡೌನ್ ಆದೇಶ ಸಂಪೂರ್ಣವಾಗಿ ಯಶಸ್ವಿಯಾಗಿ ಪಾಲನೆಯಾಗಿದೆ. ವಾರದಲ್ಲಿ ಸೋಮವಾರದಿಂದ ಶನಿವಾರದವರೆಗೆ ಲಾಕ್ಡೌನ್ ಆದೇಶದಲ್ಲಿ ಸಡಿಲಿಕೆ ಮಾಡಿ, ಭಾನುವಾರ ಕಂಪ್ಲೀಟ್ ಲಾಕ್ಡೌನ್ ಮಾಡಿದರೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.
ವಾರದಲ್ಲಿ 6 ದಿನಗಳು ಕೆಲಸ ಮಾಡಿದವರು ಭಾನುವಾರ ಸಹಜವಾಗಿ ಮನೆಯಿಂದ ಹೊರಬರುತ್ತಾರೆ. ಇದರಿಂದ ಭಾನುವಾರ ಓಡಾಡುವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡಿರುವುದು ಉತ್ತಮವಾಗಿದೆ. ಜೊತೆಗೆ ಭಾನುವಾರ ಕಂಫ್ಲೀಟ್ ಲಾಕ್ ಡೌನ್ ಆದೇಶವನ್ನು ಮುಂದುವರೆಸಿದರೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಅಲ್ಲದೆ ನಾನು ನಾನು ಕೇರಳ ಸರ್ಕಾರದ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮಾಡಿದಾಗಲೂ ಅಲ್ಲಿ ಅನುಸರಿಸುತ್ತಿರುವ ಕ್ರಮಗಳನ್ನ ಅರ್ಥೈಸಿಕೊಂಡಿದ್ದೇನೆ. ಹಾಗಾಗಿ ಇನ್ನೂ ಕೆಲ ವಾರಗಳ ಕಾಲ ಭಾನುವಾರ ಲಾಕ್ ಡೌನ್ ಆದೇಶವನ್ನು ಮುಂದುವರೆಸುವುದು ಸೂಕ್ತವಾಗಿದೆ. ಇದರಿಂದ ಸಾರ್ವಜನಿಕರು, ಸಮಾಜ ಮತ್ತು ಸರ್ಕಾರಕ್ಕೂ ಒಳ್ಳೆಯದೇ ಆಗುತ್ತೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ.








