ಬೆಂಗಳೂರಿನ ನೆಲಮಂಗಲದಲ್ಲಿ ನಡೆಯುತ್ತಿರುವ ಅಸಂಖ್ಯ ಪ್ರಮಥರ ಗಣಮೇಳ ಮತ್ತು ಸರ್ವಶರಣರ ಬೃಹತ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ.. ೯೦೦ ವರ್ಷಗಳ ಹಿಂದೆ ಅನುಭವ ಮಂಟಪ ಆರಂಭವಾಗಿತ್ತು.. ಅಲ್ಲಮಪ್ರಭು ಅವರ ನೇತೃತ್ವದಲ್ಲಿ ಆ ಸಮ್ಮೇಳನ ನಡೆದಿತ್ತು… ಈಗ ಈ ಶರಣರ ಸಮಾವೇಶ ನೋಡಿದರೆ, ೧೨ ನೇ ಶತಮಾನದ ಅನುಭವ ಮಂಟಪ ನೆನಪಿಗೆ ಬರುತ್ತೆ ಎಂದು ವೇದಿಕೆ ಮೇಲೆ ಶರಣರ ಇತಿಹಾಸವನ್ನ ಸ್ಮರಿಸಿಕೊಂಡ್ರು..
ಇನ್ನು, ವಿಶ್ವಗುರು ಬಸವಣ್ಣ ಅವರು ಮಾನವರೆಲ್ಲರೂ ಒಂದೇ ಎಂಬ ತೇರನ್ನು ಬಿಟ್ಟು ಹೋಗಿದ್ದಾರೆ…ಅದನ್ನು ಎಳೆಯುವ ಕೆಲಸ ಮಾಡಬೇಕಾಗಿದೆ ಅಂತ ಹೇಳಿದ್ರು.. ಅನುಭವ ಮಂಟಪಕ್ಕೆ ೯೦೦ ವರ್ಷಗಳು ಆದ್ರೂ ಸಮಾನತೆ, ಶೋಷಣೆ ನಿಂತಿಲ್ಲ. ಈಗ ನಾವು ಅತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಇನ್ನು, ಮಾನವ ಯಾರನ್ನು ಶೋಷಣೆ ಮಾಡಬಾರದು ಅಂತ ಸಾರಿದ್ದು ಬಸವ ಧರ್ಮ..ಇಡೀ ಜಗತ್ತಿನಲ್ಲಿ ಯಾವುದಾದ್ರೂ ಶ್ರೇಷ್ಠ ಧರ್ಮ ಇದೆ ಅಂದ್ರೆ ಅದು ಬಸವಣ್ಣನ ಲಿಂಗಾಯತ ಧರ್ಮ ಮಾತ್ರ.. ಲಿಂಗಾಯತ ಧರ್ಮ, ಮಾನವ ಧರ್ಮ ಆಗಬೇಕು ಅಂತಾ ಬಯಸುತ್ತೇನೆ ಹೇಳಿದ್ರು..








