ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೂರು ಕೊರೊನಾ ಪಾಸಿಟಿವ್ ಕೇಸಸ್ ಪತ್ತೆಯಾಗಿವೆ. ಮಂಗಳೂರಿನ ಬೆಳ್ತಂಗಡಿ ಮೂಲದ ಮೂವರು ಮುಂಬೈ ಮತ್ತು ಪೂನ ಬಂದಿದ್ದರು. ಅವರನ್ನು ಬೆಳ್ತಂಗಡಿ ಯಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ಇದೀಗ 30 ವರ್ಷದ ಪುರುಷ, 25 ವರ್ಷದ ಪುರುಷ ಮತ್ತು 55 ವರ್ಷದ ವ್ಯಕ್ತಿಗೆ ಸೋಂಕು ಧೃಡವಾಗಿದೆ. ಮಂಗಳೂರು ಸೇರಿದಂತೆ ರಾಜ್ಯದ ಬೇರೆ ಜಿಲ್ಲಳಲ್ಲಿ ಪಕ್ಕದ ರಾಜ್ಯವಾದ ಮಹಾರಾಷ್ಟ್ರದಿಂದ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇಲ್ಲಿಂದ ಬಂದವರಲ್ಲಿ ಸೋಂಕು ಹೆಚ್ಚು ಕಂಡು ಬರುತ್ತಿದೆ. ಇದರಿಂದಾಗಿ ಉಳಿದ ಜನರಲ್ಲಿ ಆತಂಕ ಹೆಚ್ಚಾಗಿದೆ. ನಿನ್ನೆಯಷ್ಟೆ ವಿಟ್ಲ ಪೊಲೀಸ್ ಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಹಾಗಾಗಿ ಇಂದು ನಾಗರಿಕರು ಸ್ವಯಂ ಲಾಕ್ ಡೌನ್ ಗೆ ಮುಂದಾಗಿದ್ದಾರೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಾಳೆಯಿಂದ ಮಧ್ಯಾಹ್ನದ ಬಳಿಕ ಲಾಕ್ ಡೌನ್ ಜಾರಿ ಮಾಡಲಾಗಿದೆ. ಬೆಳಿಗ್ಗೆ 7ರಿಂದ ಮಧ್ಯಾಹ್ನ 2 ಗಂಟೆ ತನಕ ಮಾತ್ರ ವಿಟ್ಲ ಪೇಟೆ ಓಪನ್ ಆಗಿರುತ್ತದೆ. ಬಳಿಕ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತದೆ. ಈ ವಿಚಾರವಾಗಿ ಅಂಗಡಿ ಮಾಲೀಕರು, ಆಟೋ ರಿಕ್ಷಾ, ಹೊಟೇಲ್ ಮಾಲೀಕರು ಸೇರಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸ್ವಯಂ ಪ್ರೇರಿತ ಲಾಕ್ ಡೌನ್ ನಡೆಸಲು ಒಮ್ಮತದ ನಿರ್ಧಾರ ಮಾಡಲಾಗಿದೆ. ಹಾಗಾಗಿ ನಾಳೆ ಮಧ್ಯಾಹ್ನದ ಬಳಿಕ ವಿಟ್ಲ ಪೇಟೆ ಸಂಪೂರ್ಣ ಬಂದ್ ಆಗಲಿದೆ.
ಚುನಾವಣೆಗಳು ತುಂಬಾ ದುಬಾರಿಯಾಗಿವೆ-ನನಗೀಗ 80 ವರ್ಷ ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ:ಇನ್ನು ಸಾಕು ಎಲೆಕ್ಷನ್ ರಾಜಕೀಯ ಎಂದ ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಭವಿಷ್ಯದ ಕುರಿತು ಅತ್ಯಂತ ಮಹತ್ವದ ಮತ್ತು ಭಾವನಾತ್ಮಕ ಘೋಷಣೆಯೊಂದನ್ನು ಮಾಡಿದ್ದಾರೆ. ಇನ್ಮುಂದೆ ತಾವು ಯಾವುದೇ ವಿಧಾನಸಭಾ...








