ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ಅಟ್ಟಹಾಸದ ನಡುವೆಯೂ 2020ರ ಐಪಿಎಲ್ ಟೂರ್ನಿ ನಡೆಯುವ ಆಶಾಭಾವನೆಯನ್ನು ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಹೇಳಿದ್ದಾರೆ.
ಐಪಿಎಲ್ ಟೂರ್ನಿ ನಡೆಯುತ್ತೆ ಅನ್ನೋ ವಿಶ್ವಾಸ ನನಗಿದೆ. ಯಾಕಂದ್ರೆ ನಾನು ಯಾವಾಗಲೂ ಧನತ್ಮಾಕವಾಗಿ ಯೋಚನೆ ಮಾಡುತ್ತಿರುತ್ತೇನೆ. ಒಂದು ವೇಳೆ ಐಪಿಎಲ್ ಟೂರ್ನಿ ನಡೆದ್ರೆ ಇನ್ನೂ ಒಳ್ಳೆಯದ್ದು. ಪ್ರತಿಯೊಬ್ಬರು ಅವರವರ ಆರೋಗ್ಯದ ಕಡೆಗೂ ಗಮನಹರಿಸಬೇಕು ಎಂದಿದ್ದಾರೆ. ಶ್ರೀಲಂಕಾದ ಆಲ್‍ರೌಂಡರ್ ಆಂಜಲೋ ಮ್ಯಾಥ್ಯೂಸ್ ಜೊತೆಗಿನ ಇನ್‍ಸ್ಟಾಗ್ರಾಂ ಲೈವ್ ನಲ್ಲಿ ಶಿಖರ್ ಧವನ್ ಹೇಳಿದ್ದಾರೆ.
ಇಂತಹ ಸಮಯದಲ್ಲಿ ಕೆಲವು ಕ್ರೀಡಾ ಚಟುವಟಿಕೆಗಳು ಶುರುವಾದಾಗ ಜನರಲ್ಲೂ ಧನತ್ಮಾಕ ಭಾವನೆ ಮೂಡುವಂತೆ ಮಾಡುತ್ತದೆ. ಒಂದು ವೇಳೆ ಪ್ರೇಕ್ಷಕರಿಲ್ಲದೆ ಐಪಿಎಲ್ ಆಡಿದ್ರೆ ನಾವು ಪ್ರೇಕ್ಷಕರ ಬೆಂಬಲ ಪ್ರೋತ್ಸಾಹ, ಚೀರಾಟ, ಭರಾಟೆ ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತೇವೆ. ಈಗಾಗಲೇ ನಾವು ಎರಡು ತಿಂಗಳುಗಳಿಂದ ಮನೆಯಲ್ಲೇ ಲಾಕ್ ಆಗಿಬಿಟ್ಟಿದ್ದೇವೆ. ಇದೀಗ ಆಟವಾಡುವುದನ್ನು ಎದುರು ನೋಡುತ್ತಿದ್ದೇವೆ. ಅಲ್ಲದೆ ತಂಡದ ಪರ ದೇಶದ ಪರ ಶ್ರೇಷ್ಠ ಪ್ರದರ್ಶನವನ್ನು ನೀಡಬೇಕು ಎಂಬ ಹುಮ್ಮನಲ್ಲಿಸಿರುತ್ತೇವೆ. ಆಡುವಾಗ ಇರೋ ಖುಷಿನೇ ಬೇರೆ ಅಂತ ಧವನ್ ಹೇಳಿಕೊಂಡಿದ್ದಾರೆ.
ಶಿಖರ್ ಧವನ್ ಐಪಿಎಲ್ ನಲ್ಲಿ 2013ರಿಂದ 2018ರವರೆಗೆ ಸುಮಾರು ಆರು ವರ್ಷ ಸನ್ ರೈಸರ್ಸ್ ಹೈದ್ರಬಾದ್ ತಂಡದ ಪರ ಆಡಿದ್ದಾರೆ. 2019ರಿಂದ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಇನ್ನೊಂದೆಡೆ, ಶಿಖರ್ ಧವನ್ ಲಾಕ್ ಡೌನ್ ಟೈಮ್ ನಲ್ಲಿ ಹಲವು ಕ್ರಿಕೆಟಿಗರ ಜೊತೆ ಮಾತನಾಡಿಕೊಂಡು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.








