IPL ನಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಮಾಡಿದ ಭುವಿ..!!
ಐಪಿಎಲ್ 2022 ರ ಮೊದಲ ಪಂದ್ಯದಲ್ಲಿ SRH ಬೌಲರ್‌ಗಳು ದಯನೀಯವಾಗಿ ವಿಫಲರಾದರು.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲಿ, ಬಹುತೇಕ ಎಲ್ಲಾ SRH ಬೌಲರ್‌ಗಳು ಮುಕ್ತವಾಗಿ ರನ್ ಗಳನ್ನು ಬಿಟ್ಟುಕೊಟ್ಟರು.
ಮೊದಲ ಸ್ಪೆಲ್ ನಲ್ಲಿ ನೋಬಲ್ಸ್ ಎಸೆದರೂ, ಅದ್ಬುತವಾಗಿ ಸ್ಪೆಲ್ ಮಾಡಿದ ಭುವನೇಶ್ವರ್ ನಂತರ ಬ್ಯಾಟರ್ ಗಳ ಮೇಲೆ ಸವಾರಿ ಮಾಡಲೇ ಇಲ್ಲ.
ಇಂತಹ ಕೆಟ್ಟ ಬೌಲಿಂಗ್ ನಡುವೆಯೂ ಭುವನೇಶ್ವರ್ ಅಪರೂಪದ ದಾಖಲೆ ಬರೆದಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಬೌಲರ್‌ಗಳ ಪಟ್ಟಿಯಲ್ಲಿ ಭುವನೇಶ್ವರ್ ಅಗ್ರಸ್ಥಾನದಲ್ಲಿದ್ದಾರೆ.
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ 4 ಓವರ್‌ಗಳಲ್ಲಿ 29 ರನ್ ನೀಡಿ 1 ವಿಕೆಟ್ ಉರುಳಿಸಿದ್ದರು. ಇದರಲ್ಲಿ 12 ಡಾಟ್ ಬಾಲ್‌ಗಳಿವೆ.
ಐಪಿಎಲ್‌ನಲ್ಲಿ ಭುವನೇಶ್ವರ್ ಇದುವರೆಗೆ 133 ಪಂದ್ಯಗಳಲ್ಲಿ 1338 ಡಾಟ್ ಬಾಲ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಹರ್ಭಜನ್ ಸಿಂಗ್ 163 ಪಂದ್ಯಗಳಲ್ಲಿ 1314 ಡಾಟ್ ಬಾಲ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರು.
ರವಿಚಂದ್ರನ್ ಅಶ್ವಿನ್ 167 ಪಂದ್ಯಗಳಲ್ಲಿ 1293 ಡಾಟ್ ಬಾಲ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ ರಾಜಸ್ಥಾನ್ ರಾಯಲ್ಸ್ ಬೃಹತ್ ಸ್ಕೋರ್ ದಾಖಲಿಸಿತ್ತು.
ರಾಜಸ್ಥಾನ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 210 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ 149 ರನ್ ಗಳಿಸಷ್ಟೇ ಶಕ್ತಿಯಾದ್ರು.