Akhilesh Yadav | ಮಹತ್ವದ ನಿರ್ಧಾರ ತೆಗೆದುಕೊಂಡ ಅಖಿಲೇಶ್ ಯಾದವ್..!!akhilesh-yadav-expelled-members saaksha tv
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಅಖಿಲೇಶ್ ಅವರು ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಅವರಿಗೆ ನಿಕಟವಾಗಿರುವ ಕೆಲವು ನಾಯಕರ ಮೇಲೆ ಉಚ್ಛಾಟನಾ ಅಸ್ತ್ರ ಪ್ರಯೋಗಿಸಿದ್ದಾರೆ. ಹೀಗಾಗಿ ಶಿವಪಾಲ್ ಗರಂ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಗಾಜಿಪುರದಲ್ಲಿ ಎಂಎಲ್ಸಿ ಚುನಾವಣೆಯ ಅಂಗವಾಗಿ, ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ಕೆಲಸ ಮಾಡಿದ ಮಾಜಿ ಶಾಸಕ ಕೈಲಾಶ್ ಸಿಂಗ್ ಮತ್ತು ಗಾಜಿಪುರ ಜಿಲ್ಲೆಯ ಮಾಜಿ ಪಂಚಾಯತ್ ಅಧ್ಯಕ್ಷ ವಿಜಯ್ ಯಾದವ್ ಸೇರಿದಂತೆ ಹಲವು ಪಕ್ಷದ ಸದಸ್ಯರನ್ನು ಅಖಿಲೇಶ್ ಉಚ್ಚಾಟಿಸಿದ್ದಾರೆ ಎಂದು ತಿಳಿದು ಬಂದಿದೆ.
ಏತನ್ಮಧ್ಯೆ, ಯಾದವ್ ಮಂಗಳವಾರ ಪಕ್ಷದ ಮಿತ್ರಪಕ್ಷಗಳಾದ ಅಪ್ನಾದಲ್ (ಕೆ), ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಎಸ್ಬಿಎಸ್ಪಿ) ಮತ್ತು ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ನಾಯಕರ ಜೊತೆ ಸಭೆ ನಡೆಸಿದ್ದರು.
ಆದರೆ, ಜಸ್ವಂತ್ ನಗರದಿಂದ ಎಸ್ಪಿ ಟಿಕೆಟ್ನಲ್ಲಿ ಸ್ಪರ್ಧಿಸಿದ್ದ ಶಾಸಕ ಮತ್ತು ಪ್ರಗತಿಶೀಲ ಸಮಾಜವಾದಿ ಪಕ್ಷದ (ಪಿಎಸ್ಪಿ) ಮುಖಂಡ ಶಿವಪಾಲ್ ಯಾದವ್ ಅವರು ಸಭೆಗೆ ಹಾಜರಾಗಲಿಲ್ಲ.
ಇವರೊಂದಿಗೆ ಅಪ್ನಾದಲ್ (ಕೆ) ನಾಯಕಿ ಪಲ್ಲವಿ ಪಟೇಲ್ ಕೂಡ ಸಭೆಗೆ ಹಾಜರಾಗಿರಲಿಲ್ಲ.
ಅಖಿಲೇಶ್ ಯಾದವ್ ಅವರೊಂದಿಗಿನ ಸಭೆಯಲ್ಲಿ ಎಸ್ಬಿಎಸ್ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಭರ್ ಮತ್ತು ಆರ್ಎಲ್ಡಿ ಶಾಸಕಾಂಗ ಪಕ್ಷದ ನಾಯಕ ರಾಜ್ಪಾಲ್ ಬಲಿಯಾನ್ ಭಾಗವಹಿಸಿದ್ದರು. ಸಭೆಯಲ್ಲಿ ಸೋಲಿಗೆ ಕಾರಣಗಳ ಕುರಿತು ಚರ್ಚೆ ನಡೆಸಲಾಯಿತು.
ಆದರೆ, ಸಭೆಗೆ ಶಿವಪಾಲ್ ಯಾದವ್ ಗೈರು ಹಾಜರಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಅಖಿಲೇಶ್ ಯಾದವ್, ನಮ್ಮಲಿ್ ಯಾವುದೇ ಸಮಸ್ಯೆಯಾಗಿಲ್ಲ, ಎಲ್ಲರೂ ಒಟ್ಟಿಗೆ ಇದ್ದೇವೆ ಎಂದು ಹೇಳಿದ್ದಾರೆ. akhilesh-yadav-expelled-members