ಏ,2 ರಿಂದ ಕೋವಿಡ್ ನಿಯಮಗಳಿಗೆ ಮುಕ್ತಿ, ಮಾಸ್ಕ್ ನಿರ್ಬಂಧ ತಗೆದ ಮಹಾರಾಷ್ಟ್ರ
ಭಾರತದಲ್ಲಿ ಕೊರೊನಾ ಪ್ರಕರಣಗಳು ನಿರಂತರವಾಗಿ ಕಡಿಮೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರ ರಾಜ್ಯದಲ್ಲಿ ಅನ್ವಯವಾಗುವ ಎಲ್ಲಾ ಕರೋನಾ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಿದೆ. ಮಹಾರಾಷ್ಟ್ರದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ಏಪ್ರಿಲ್ 2 ರಿಂದ ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಸ್ವಯಂಪ್ರೇರಿತವಾಗಿರುತ್ತದೆ. ಅಂದರೆ, ಈಗ ಜನತೆ ಮಾಸ್ಕ್ ಧರಿಸುತ್ತಾರೋ ಇಲ್ಲವೋ ಎಂಬುದು ಸಾರ್ವಜನಿಕರಿಗೆ ಬಿಟ್ಟದ್ದು ಎಂದು ಈ ಬಗ್ಗೆ ಮಾಹಿತಿ ಆರೋಗ್ಯ ಸಚಿವ ರಾಜೇಶ್ ಟೋಪೆ ನೀಡಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಈ ಮಾಹಿತಿ ನೀಡಿದ್ದಾರೆ. ಮರಾಠಿ ಹೊಸ ವರ್ಷದ ಗುಡಿ ಪಾಡ್ವಾದಿಂದ, ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಎಲ್ಲಾ COVID-19 ಸಂಬಂಧಿತ ನಿರ್ಬಂಧಗಳನ್ನು ಹಿಂಪಡೆಯಲಾಗುವುದು ಎಂದು ಟೋಪೆ ಹೇಳಿದರು. ಮಹಾರಾಷ್ಟ್ರದಲ್ಲಿ ಎರಡು ವರ್ಷಗಳ ನಂತರ, ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲಾ ಸಾಂಕ್ರಾಮಿಕ-ಸಂಬಂಧಿತ ನಿರ್ಬಂಧಗಳನ್ನ ತೆಗೆಯಲಾಗುತ್ತಿದೆ.
ಈ ಬಾರಿ ಗುಡಿ ಪಾಡ್ವ ಏಪ್ರಿಲ್ 2 ರಂದು ಬರುತ್ತಿದೆ. ಏಪ್ರಿಲ್ 2 ರಿಂದ ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಸ್ವಾ ಇಚ್ಛೆಯಾಗಿರುತ್ತದೆ ಎಂದು ಅವರು ಹೇಳಿದರು. ಈಗ ಮಾಸ್ಕ್ ಧರಿಸಬೇಕೋ ಬೇಡವೋ ಎಂಬುದು ಜನಸಾಮಾನ್ಯರಿಗೆ ಬಿಟ್ಟ ವಿಷಯ. ಈ ಮೂಲಕ ಮಾಸ್ಕ್ ನಿರ್ಬಂಧವನ್ನ ತೆಗೆದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರ ಪಾತ್ರವಾಗಿದೆ.








