ಪಾಕಿಸ್ತಾನದ ಮಾಜಿ ಪ್ರಧಾನಿ ಮೇಲೆ ದಾಳಿ
ಲಂಡನ್ : ಪಾಕಿಸ್ತಾನದ ಮಾಜಿ ಪ್ರಾಧಾನಮಂತ್ರಿ ನವಾಜ್ ಶರೀಫ್ ಮೇಲೆ ಲಂಡನ್ ನಲ್ಲಿ ಪಾಕಿಸ್ತಾನ್-ಇ-ಇನ್ಸಾಫ್ (ಪಿಟಿಐ-ಇಮ್ರಾನ್ ಖಾನ್ ಪಕ್ಷ)ನ ಕಾರ್ಯಕರ್ತನೊಬ್ಬ ದಾಳಿ ಮಾಡಿದ್ದಾನೆ.
ಈ ದಾಳಿಯಿಂದ ನವಾಜ್ ಶರೀಫ್ ಪಾರಾಗಿದ್ದು, ಅವರ ಅಂಗರಕ್ಷಕನಿಗೆ ಗಾಯವಾಗಿದೆ ಎಂದೂ ವರದಿಯಾಗಿದೆ. ಈ ಕುರಿತು ಪಾಕಿಸ್ತಾನದ ಫ್ಯಾಕ್ಟ್ ಫೋಕಸ್ ವರದಿಗಾರ ಅಹ್ಮದ್ ರೂನಾನಿ ಟ್ವೀಟ್ ಮಾಡಿದ್ದಾರೆ. ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಲು ಪೊಲೀಸ್ ಕಾರ್ಯಾಚರಣೆ ಪ್ರಾರಂಭವಾಗಿದ್ದಾಗಿಯೂ ತಿಳಿಸಲಾಗಿದೆ.
ಅಲ್ಲಿ ದಾಳಿ ನಡೆದರೆ ಇತ್ತ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಲಿದೆ. ಈ ಸಂಬಂಧ ದಾಳಿ ಮಾಡಲಾಗಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಇಮ್ರಾನ್ ಖಾನ್ ನಂತರ ಪಾಕಿಸ್ತಾನ ಪ್ರಧಾನಿ ಹುದ್ದೆಗೆ ಏರುವುದು ನವಾಜ್ ಶರೀಫ್ ಸಹೋದರ ಶೆಹಬಾಜ್ ಶರೀಫ್ ಎಂದು ಮೂಲಗಳು ತಿಳಿಸಿವೆ. ಇಂದು ಇಮ್ರಾನ್ ಖಾನ್ ಯಾವ್ ಕಾರಣಕ್ಕೂ ವಿಶ್ವಾಸ ಮತ ಯಾಚನೆಯಲ್ಲಿ ಗೆಲ್ಲುವುದಿಲ್ಲ. ಇವರು ಹುದ್ದೆಯಿಂದ ಇಳಿದ ಬಳಿಕ ಪಾಕಿಸ್ತಾನ ಮುಸ್ಲಿಂ ಲೀಗ್ (ಎನ್) ಪಕ್ಷದ ಶೆಹಬಾಜ್ ಶರೀಫ್ ಅವರೇ ಹುದ್ದೆಗೆ ಏರಲಿದ್ದಾರೆ ಎಂಬುದು ಪಾಕ್ ಮಾಧ್ಯಮಗಳ ವರದಿ ಮಾಡಿವೆ.








