Nawaz sharif: ಪಾಕಿಸ್ತಾನದ ಮಾಜಿ ಪ್ರಧಾನಿ ಮೇಲೆ ದಾಳಿ | ದಾಳಿಯಿಂದ ಪಾರಾದ ನವಾಜ್​ ಶರೀಫ್​​

1 min read
Nawaz Sharif Saaksha Tv

ಪಾಕಿಸ್ತಾನದ ಮಾಜಿ ಪ್ರಧಾನಿ ಮೇಲೆ ದಾಳಿ

ಲಂಡನ್ :  ಪಾಕಿಸ್ತಾನದ ಮಾಜಿ ಪ್ರಾಧಾನಮಂತ್ರಿ ನವಾಜ್​ ಶರೀಫ್​​  ಮೇಲೆ ಲಂಡನ್ ನಲ್ಲಿ ಪಾಕಿಸ್ತಾನ್​-ಇ-ಇನ್ಸಾಫ್​ (ಪಿಟಿಐ-ಇಮ್ರಾನ್​ ಖಾನ್​ ಪಕ್ಷ)ನ ಕಾರ್ಯಕರ್ತನೊಬ್ಬ ದಾಳಿ ಮಾಡಿದ್ದಾನೆ.

ಈ ದಾಳಿಯಿಂದ ನವಾಜ್​ ಶರೀಫ್​​ ಪಾರಾಗಿದ್ದು, ಅವರ ಅಂಗರಕ್ಷಕನಿಗೆ ಗಾಯವಾಗಿದೆ ಎಂದೂ ವರದಿಯಾಗಿದೆ. ಈ ಕುರಿತು ಪಾಕಿಸ್ತಾನದ ಫ್ಯಾಕ್ಟ್ ಫೋಕಸ್​ ವರದಿಗಾರ ಅಹ್ಮದ್​ ರೂನಾನಿ ಟ್ವೀಟ್ ಮಾಡಿದ್ದಾರೆ. ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಲು ಪೊಲೀಸ್ ಕಾರ್ಯಾಚರಣೆ ಪ್ರಾರಂಭವಾಗಿದ್ದಾಗಿಯೂ ತಿಳಿಸಲಾಗಿದೆ.

ಅಲ್ಲಿ ದಾಳಿ ನಡೆದರೆ ಇತ್ತ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಲಿದೆ. ಈ ಸಂಬಂಧ ದಾಳಿ ಮಾಡಲಾಗಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಇಮ್ರಾನ್​ ಖಾನ್​ ನಂತರ ಪಾಕಿಸ್ತಾನ ಪ್ರಧಾನಿ ಹುದ್ದೆಗೆ ಏರುವುದು ನವಾಜ್ ಶರೀಫ್ ಸಹೋದರ ಶೆಹಬಾಜ್​ ಶರೀಫ್​ ಎಂದು ಮೂಲಗಳು ತಿಳಿಸಿವೆ. ಇಂದು ಇಮ್ರಾನ್ ಖಾನ್ ಯಾವ್​ ಕಾರಣಕ್ಕೂ ವಿಶ್ವಾಸ ಮತ ಯಾಚನೆಯಲ್ಲಿ ಗೆಲ್ಲುವುದಿಲ್ಲ. ಇವರು ಹುದ್ದೆಯಿಂದ ಇಳಿದ ಬಳಿಕ ಪಾಕಿಸ್ತಾನ ಮುಸ್ಲಿಂ ಲೀಗ್​ (ಎನ್​) ಪಕ್ಷದ ಶೆಹಬಾಜ್​ ಶರೀಫ್​ ಅವರೇ ಹುದ್ದೆಗೆ ಏರಲಿದ್ದಾರೆ ಎಂಬುದು ಪಾಕ್​ ಮಾಧ್ಯಮಗಳ ವರದಿ ಮಾಡಿವೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd