women’s world cup 2022 | 7ನೇ ಬಾರಿಗೆ ವಿಶ್ವಕಪ್ ಎತ್ತಿದ ಆಸ್ಟ್ರೇಲಿಯಾ..!!!
ಕ್ರೈಸ್ಟ್ ಚರ್ಚ್ ನ ಹ್ಯಾಂಗ್ಲೆ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಚರಿತ್ರೆ ನಿರ್ಮಿಸಿದೆ. ಬರೋಬ್ಬರಿ ಏಳನೇ ಬಾರಿಗೆ ಆಸ್ಟ್ರೇಲಿಯಾದ ಮಹಿಳಾ ತಂಡ ಏಕದಿನ ವಿಶ್ವಕಪ್ ಎತ್ತಿ ಹಿಡಿದಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ, ಆಸ್ಟ್ರೇಲಿಯಾ ತಂಡವನ್ನ ಬ್ಯಾಟಿಂಗ್ ಆಹ್ವಾನಿಸಿತ್ತು. ಆಸ್ಟ್ರೇಲಿಯಾಗೆ ಆರಂಭಿಕರಾದ ಆಲಿಸಾ ಹೀಲಿ ಮತ್ತು ರಾಶೆಲ್ ಮೊದಲ ವಿಕೆಟ್ಗೆ 160 ರನ್ಗಳ ಜೊತೆಯಾಟ ತಂದುಕೊಟ್ಟರು. ಹೀಲಿ ಮತ್ತು ಹೇಯ್ನ್ಸ್ ಇಬ್ಬರೂ ಅರ್ಶಶತಕದ ಗಡಿ ದಾಟಿದರು. ಹೇಯ್ನ್ಸ್ 93 ಎಸೆತಗಳಲ್ಲಿ 68 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಅಲಿಸಾ ಹೀಲಿ ಶತಕದ ಸಂಭ್ರಮವನ್ನು ಆಚರಿಸಿಕೊಂಡರು. ಶತಕದ ಬಳಿಕ ಹೀಲಿ ಆಟ ವಿಸ್ಪೋಟಕ ವಾಗಿತ್ತು. ನೋಡ ನೋಡುತ್ತಿದ್ದಂತೆ ಹೀಲಿ 150 ರನ್ಗಳ ಗಡಿ ದಾಟಿ ಮುನ್ನಡೆದರು. 2ನೇ ವಿಕೆಟ್ಗೆ 158 ರನ್ಗಳ ಜೊತೆಯಾಟ ಬಂದಿತ್ತು. ಹೀಲಿ ಕೇವಲ 138 ಎಸೆತಗಳಲ್ಲಿ 26 ಬೌಂಡರಿಗಳ ನೆರವಿನಿಂದ 170 ರನ್ಗಳಿಸಿ ಔಟಾದರು.
47 ಎಸೆತಗಳಲ್ಲಿ 62 ರನ್ಗಳಿಸಿದ್ದ ಮೂನಿ ಆಟವು ಕೊನೆಗೊಂಡಿತ್ತು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 356 ರನ್ಗಳಿಸಿತು.
ಬೃಹತ್ ಮೊತ್ತದ ಚೇಸಿಂಗ್ಗೆ ಇಳಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಲಿಲ್ಲ. ಡ್ಯಾನಿ ವ್ಯಾಟ್ (4) ಮತ್ತು ಟಾಮಿ ಬಿಮೌಂಟ್ (27) ಸಿಡಿಸಿ ಬೇಗ ವಿಕೆಟ್ ಒಪ್ಪಿಸಿದರು. ಹೀದರ್ ನೈಟ್ (26) ರನ್. ಏಮಿ ಜೋನ್ಸ್ (20) ರನ್ , ಸೋಫಿಯಾ ಡಂಕ್ಲಿ (23) ರನ್ ಗೆ ಸುಸ್ತಾದರು. ಆದ್ರೆ ಅನುಭವಿ ಆಟಗಾರ್ತಿ ನ್ಯಾಟ್ ಸಿವಿರ್ ಶತಕದ ಸಿಡಿಸಿ ಆಸ್ಟ್ರೇಲಿಯಾ ಬೌಲರ್ಗಳ ಚಳಿ ಬಿಡಿಸಿದರು. ನ್ಯಾಟ್ ಸಿವಿರ್ 121 ಎಸೆತಗಳಲ್ಲಿ ಅಜೇಯ 148 ರನ್ಗಳಿಸಿ ನಿರಾಸೆ ಅನುಭವಿಸಿದರು.
ಇಂಗ್ಲೆಂಡ್ 43.4 ಓವರುಗಳಲ್ಲಿ 285 ರನ್ಗಳಿಗೆ ಆಲೌಟ್ ಆಗಿ 71 ರನ್ಗಳ ಸೋಲನುಭವಿಸಿತು. ಇದರೊಂದಿಗೆ ಆಸ್ಟ್ರೇಲಿಯಾದ ತಂಡ ಏಳನೇ ಬಾರಿಗೆ ವಿಶ್ವಕಪ್ ಎತ್ತಿ ಹಿಡಿಯಿತು. women’s world cup 2022 final highlights









