RGV | ಲಿಪ್ ಲಾಕ್ ಮಾಡಿದ್ರೆ #RRR “ಆ” ಸಿನಿಮಾ ಆಗ್ತಿತ್ತು
ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಆರ್ ಆರ್ ಆರ್ ಸಿನಿಮಾದ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಚಿತ್ರದಲ್ಲಿ ಎನ್‌ಟಿಆರ್ ಮತ್ತು ರಾಮ್ ಚರಣ್ ಲಿಪ್‌ಲಾಕ್ ಮಾಡಿಲ್ಲ, ಹೀಗಾಗಿ ಅದು ಫ್ರೆಂಡ್ ಶಿಪ್ ಆಗಿದೆ. ಒಂದು ವೇಳೆ ಲಿಪ್ಲಾಕ್ ಮಾಡಿದ್ರೆ ಅದು ಗೇ ಚಿತ್ರವಾಗುತ್ತಿತ್ತು ಎಂದು ವರ್ಮಾ ಹೇಳಿದ್ದಾರೆ.
ತಮ್ಮ ‘ಡೇಂಜರಸ್’ ಸಿನಿಮಾದ ಭಾಗವಾಗಿ ವರ್ಮಾ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಈ ಹೇಳಿಕೆಯನ್ನು ನೀಡಿದ್ದಾರೆ. ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ ಮುಖ್ಯ ಭೂಮಿಕೆಯಲ್ಲಿರುವ ಡೇಂಜರಸ್ ಏಪ್ರಿಲ್ 8 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಆರ್ ಜಿವಿ, ‘ಡೇಂಜರಸ್ ಸ್ಟೋರಿ ರೆಗ್ಯೂಲರ್ ಕಥೆ, ಅದರಲ್ಲಿ ಇಬ್ಬರು ಹುಡುಗಿಯರಿರುವುದು ಹೊಸತನ’ ಎಂದರು.
ಅಂದಹಾಗೆ ಆರ್ ಜಿವಿ, RRR ಸಿನಿಮಾವನ್ನ ತನ್ನ ಚಿತ್ರದ ಪ್ರಚಾರಕ್ಕಾಗಿ ಬಳಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ ಎನ್‌ಟಿಆರ್ ಮತ್ತು ಚರಣ್ ಅವರನ್ನ.. ‘ಡೇಂಜರಸ್’ ನಾಯಕಿಯರಾದ ನೈನಾ ಗಂಗೂಲಿ ಮತ್ತು ಅಪ್ಸರಾ ರಾಣಿಗೆ ಹೋಲಿಕೆ ಮಾಡಿದ್ದರು. ‘ರಾಜಮೌಳಿ.. ನಿಮಗೆ ರಾಮ್ ಚರಣ್, ಎನ್ ಟಿಆರ್ ರಂತಹ ಡೆಂಜರಸ್ ಹುಡುಗರಿದ್ದರೆ.. ನನಗೆ ಅಪ್ಸರಾ ರಾಣಿ, ನೈನಾ ಗಂಗೂಲಿಯಂತಹ ಅಪಾಯಕಾರಿ ಹುಡುಗಿಯರಿದ್ದಾರೆ ಎಂದು ಟ್ವೀಟ್ ಮಾಡಿದ್ದರು.









