ಬಸವರಾಜ್ ಹೊಟ್ಟಿಯವರ ಹೇಳಿಕೆಯಿಂದ ನನಗೆ ಶಾಕ್ ಆಗಿಲ್ಲ : ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಸಭಾಪತಿ ಬಸವರಾಜ್ ಹೊಟ್ಟಿಯವರ ಹೇಳಿಕೆಯಿಂದ ನನಗೆ ಶಾಕ್ ಆಗಿಲ್ಲ, ಹೊರಟ್ಟಿ ಹೋದರೆ ಯಾಕೆ ತೆಲಡಕೆಡಿಸಿಕೊಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸಭಾಪತಿ ಬಸವರಾಜ್ ಹೊರಟ್ಟಿ ಅವರು ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಘೋಷಿಸಿದ್ದು, ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯವರು ಖರ್ಚು ಮಾಡ್ತಾರೆ. ಅಷ್ಟೊಂದು ಖರ್ಚು ಮಾಡಲು ನನ್ನಿಂದ ಸಾಧ್ಯವಿಲ್ಲ ಅಂತಿದ್ದರು ಹೊರಟ್ಟಿ. ಅವರಿವರು ಕರೆಯುತ್ತಿದ್ದಾರೆ ಎಂದೂ ಕಳೆದ ವಾರವೇ ಹೇಳಿದ್ದರು.
ಅಲ್ಲದೇ ನನಗಾಗಿ ನಿಮ್ಮ ಭವಿಷ್ಯ ಹಾಳುಮಾಡಿಕೊಳ್ಳಬೇಡಿ ಹೋಗಿ ಅಂದಿದ್ದೆ. ಬಸವರಾಜ ಬೊಮ್ಮಾಯಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ 100ಕ್ಕೂ ಹೆಚ್ಚು ನಾಯಕರು ಜೆಡಿಎಸ್ನಿಂದ ಹೊರಹೋಗಿದ್ದಾರೆ. ಬಸವರಾಜ ಹೊರಟ್ಟಿ 101ನೇಯವರು, ಆದರೂ ಪಕ್ಷ ಉಳಿದಿದೆ. ಪಕ್ಷಕ್ಕೆ ಮತ್ತೊಬ್ಬ ಹೊರಟ್ಟಿ, ಮತ್ತೊಬ್ಬ ಕೋನರೆಡ್ಡಿ ಬರಬಹುದು ಎಂದು ಹೇಳಿದರು.
ಇನ್ನೂ ಅವರಿದ್ದಾಗ ಏನು ಬಾಂಬೆ ಕರ್ನಾಟಕ ಉದ್ಧಾರ ಆಗಿತ್ತಾ? ಅವರ ಭವಿಷ್ಯವನ್ನು ನಾನ್ಯಾಕೆ ಹಾಳುಮಾಡಲಿ ಅಷ್ಟಕ್ಕೂ ಅವರನ್ನು ಸಭಾಪತಿ ಮಾಡಿದ್ದು ಬಿಜೆಪಿಗೆ ಹೋಗಲಿಕ್ಕಾ? ಬಿಜೆಪಿಗೆ ಹೋಗತಿನಿ ಅಂದ್ರೆ ಬೇಡ ಅಂತಾ ಗೋಗರೆಯೋಕೆ ಆಗುತ್ತಾ? ಎಂದು ಕುಮಾರಸ್ವಾಮಿ ಅವರು ಹೊರಟ್ಟಿ ನಡೆಯನ್ನು ಲೇವಡಿ ಮಾಡಿದರು.
ಜೆಡಿಎಸ್ ಗೆ ಅಸ್ಥಿರತೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ. ಆದರೆ ಅಸ್ಥಿರತೆ ಅವರಿಗೆ ಇರಬಹುದು. ಕೇಂದ್ರದಿಂದ ಮಂತ್ರಿಗಿರಿ ಕಳೆದುಕೊಂಡು ಬಂದಿದ್ದಾರಲ್ಲಾ, ಯಾಕೆ ತೆಗೆದರು? ಎಂದು ತಿರುಗೇಟು ನೀಡಿದರು.









