IPL 2022 | ಈ 3 ತಂಡಗಳಲ್ಲಿ ಒಂದು ತಂಡಕ್ಕೆ ಚಾಂಪಿಯನ್ ಪಟ್ಟ..!
ಇಂಡಿಯನ್ ಪ್ರಿಮಿಯರ್ ಲೀಗ್ ಶುರುವಾಗಿ ಎಂದಿನಂತೆ ಮನರಂಜನೆ ನೀಡುತ್ತಾ ಸಾಗುತ್ತಿದೆ. ಹೊಸ ತಂಡಗಳ ಆಗಮನ ಟೂರ್ನಿಗೆ ಮತ್ತಷ್ಟು ರಂಗು ಕೊಟ್ಟಿದೆ. ಜೊತೆಗೆ ಹೊಸ ನಾಯಕರ ಖದರ್ ತಂಡಗಳ ಲೆಕ್ಕಾಚಾರವನ್ನ ಬದಲಿಸಿದೆ. ಈ ಬಾರಿಯ ಟೂರ್ನಿ ಆರಂಭವಾಗಿ ಒಂದು ವಾರ ಕಳೆದಿದೆ. ಎಲ್ಲಾ ತಂಡಗಳು ತಲಾ ಕನಿಷ್ಠ ಎರಡು ಪಂದ್ಯಗಳನ್ನಾಡಿವೆ. ಹೀಗಾಗಿ ಈ ಬಾರಿಯ ಚಾಂಪಿಯನ್ ಯಾರಾಗಬಹುದು ಎಂಬ ಲೆಕ್ಕಾಚಾರ ಜೋರಾಗಿದೆ.
ಕ್ರಿಕೆಟ್ ಪಂಡಿತರ ಪ್ರಕಾರ ಈ ಬಾರಿ ಪಂಜಾಬ್, ರಾಜಸ್ಥಾನ್, ಬೆಂಗಳೂರು ತಂಡಗಳಲ್ಲಿ ಒಂದು ತಂಡ ಚಾಂಪಿಯನ್ ಆಗಲಿದೆಯಂತೆ.
ಮೊದಲನೇಯದಾಗಿ ರಾಜಸ್ಥಾನ್ ರಾಯಲ್ಸ್ ತಂಡ.. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ತಂಡ ಈ ಬಾರಿಗೆ ತುಂಬಾ ಬಲಿಷ್ಠವಾಗಿ ಕಾಣುತ್ತಿದೆ. ಐಪಿಎಲ್ ಮೊದಲ ಆವೃತ್ತಿಯ ಚಾಂಪಿಯನ್ ಆದ ರಾಜಸ್ಥಾನ್, ಬಳಿಕ ಸದ್ದು ಮಾಡಿದ್ದೇ ಇಲ್ಲ. ಇದಕ್ಕೆ ಕಾರಣ ತಂಡದಲ್ಲಿದ್ದ ಸಮಸ್ಯೆಗಳು. ಪ್ರತಿ ವರ್ಷ ಉತ್ತಮ ಆಟದ ಹೊರತಾಗಿ ತಂಡದಲ್ಲಿ ಅನಾನುಭವಿ ಬೌಲರ್ ಮತ್ತು ಗುಣಮಟ್ಟದ ಆಲ್ ರೌಂಡರ್ ಗಳು ಇಲ್ಲದಿರುವ ಕಾರಣ ತಂಡ ನಿರಾಸೆ ಅನುಭವಿಸುತ್ತಾ ಬಂದಿದೆ. ಆದ್ರೆ ಈ ಬಾರಿ ತಂಡದಲ್ಲಿ ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್ ಮತ್ತು ರಿಯಾನ್ ಪರಾಗ್ ರಂತಹ ಪ್ರತಿಭಾನ್ವಿತ ಆಟಗಾರರಿದ್ದಾರೆ. ಜೊತೆಗೆ ಯುಜ್ವೇಂದ್ರ ಚಾಹಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ನವದೀಪ್ ಸೈನಿ ಯಂತಹ ಬೌಲರ್ ಗಳಿದ್ದಾರೆ. ಹೀಗಾಗಿ ರಾಜಸ್ಥಾನ್ ತಂಡ ಈ ಬಾರಿ ಟೈಟಲ್ ಗೆಲ್ಲುವ ಸಾಧ್ಯತೆಗಳಿವೆ.
ಎರಡನೇಯದಾಗಿ ಪಂಜಾಬ್ ಕಿಂಗ್ಸ್ ಪಂಜಾಬ್ ಕಿಂಗ್ಸ್, ಐಪಿಎಲ್ 2022 ರ ತಮ್ಮ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದೆ.
ತಂಡದಲ್ಲಿ ಅನುಭವಿ ಆಟಗಾರರ ದಂಡೇ ಇದೆ. ಬ್ಯಾಟಿಂಗ್ ನಲ್ಲಿ ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಮಯಾಂಕ್ ಭಾನುಕಾ ರಾಜಪಕ್ಸೆ ಇದ್ದರೇ ಬೌಲಿಂಗ್ ನಲ್ಲಿ ಕಗಿಸೊ ರಬಾಡಾ, ಲಿಯಾಮ್ ಲಿವಿಂಗ್‌ಸ್ಟೋನ್, ಸಂದೀಪ್ ಶರ್ಮಾ, ಅರ್ಷ್‌ದೀಪ್ ಸಿಂಗ್ ಮತ್ತು ರಾಹುಲ್ ಚಹಾರ್ ಇದ್ದಾರೆ. ಈ ಬಾರಿ ಪಂಜಾಬ್ ತಂಡ ಸಾಲಿಡ್ ಆಗಿದ್ದು, ಎದುರಾಳಿಗಳ ಮೇಲೆ ಸವಾರಿ ಮಾಡಲಿದೆ.
ಇನ್ನು ಮೂರನೇಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು..
ಪ್ರತಿ ಬಾರಿ ಆರ್ ಸಿಬಿ ಟೈಟಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾದ್ರೂ ಕಪ್ ಗೆಲ್ಲುವ ಕನಸು ಮರೀಚಿಕೆಯಾಗಿದೆ. ಆದ್ರೆ ಈ ಬಾರಿ ಕಪ್ ಗೆಲ್ಲುವ ಸಾಧ್ಯತೆಗಳಿವೆ ಅನ್ನೋದು ಕ್ರಿಕೆಟ್ ಪಂಡಿತರ ಮಾತು. ಯಾಕಂದರೇ ತಂಡದಲ್ಲಿ ವಿರಾಟ್ ಕೊಹ್ಲಿ, ಮ್ಯಾಕ್ಸಿ, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ ಅವರಂತಹ ಅಂತರರಾಷ್ಟ್ರೀಯ ಆಟಗಾರರಿದ್ದಾರೆ.
ಜೊತೆಗೆ ಫಾಫ್ ಡುಪ್ಲಸಿ ನಾಯಕತ್ವ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಇದಲ್ಲದೇ ಅನುಭವಿ ಮ್ಯಾಚ್ ಫಿನಿಷರ್ ದಿನೇಶ್ ಕಾರ್ತಿಕ್, ವಿಶ್ವದರ್ಜೆ ಬೌಲರ್ ಗಳಾದ ಜೋಶ್ ಹ್ಯಾಜಲ್ ವುಡ್, ಸಿರಾಜ್ ತಂಡದಲ್ಲಿದ್ದಾರೆ. ಇವರ ಹೊರತಾಗಿ ಅನುಜ್ ರಾವತ್, ರುದರ್ ಪೋರ್ಡ್ ರಂತಹ ಯುವ ಆಟಗಾರರಿದ್ದಾರೆ. ipl-2022-3-teams-likely-to-end-up-with-trophy-at-the-end-of-season










