IPL 2022 | ಜೋಸ್ ಬಟ್ಲರ್ ಹೆಸರಲ್ಲಿ ಮತ್ತೊಂದು ಶತಕ ipl-2022-jos-buttler-joins-100-sixes-club saaksha tv
ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಐಪಿಎಲ್ ನಲ್ಲಿ ಮತ್ತೊಂದು ಶತಕ ಬಾರಿಸಿದ್ದಾರೆ. ಅಯ್ಯೋ ರಾಮ..! ಆರ್ ಸಿಬಿ ವಿರುದ್ಧ ಬಟ್ಲರ್ ಸಿಡಿಸಿದ್ದು, ಅರ್ಧಶತಕ ಅಲ್ವಾ..? ಶತಕ ಎಲ್ಲಿಂದ ಬಂತು..? ಅಂತಾ ಅನುಮಾನ ವ್ಯಕ್ತವಾಗುತ್ತಿದ್ಯಾ..?
ಬಟ್ಲರ್ ಸಿಡಿಸಿರೋದು ಸಿಕ್ಸರ್ ಗಳ ಶತಕ..!! ಹೌದು..! ಜೋಸ್ ಬಟ್ಲರ್ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ನೂರು ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ.
ನೂರು ಸಿಕ್ಸರ್ ಗಳನ್ನು ಬಾರಿಸಲು ಬಟ್ಲರ್ ಐಪಿರಲ್ ನಲ್ಲಿ 69 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ. ಒಟ್ಟಾರೆ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ನೂರು ಸಿಕ್ಸರ್ ಸಿಡಿಸಿದ 26ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳನ್ನು ಬಾರಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ 357 ಸಿಕ್ಸರ್ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಎಬಿ ಡಿವಿಲಿಯರ್ಸ್ 251 ಸಿಕ್ಸರ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೇ ರೋಹಿತ್ ಶರ್ಮಾ 232 ಸಿಕ್ಸರ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಎಂಎಸ್ ಧೋನಿ 222 ಸಿಕ್ಸರ್ಗಳೊಂದಿಗೆ ನಾಲ್ಕನೇ ಮತ್ತು ಪೊಲಾರ್ಡ್ 215 ಸಿಕ್ಸರ್ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಇದರ ನಂತರ ಕ್ರಮವಾಗಿ ಕೊಹ್ಲಿ (212 ಸಿಕ್ಸರ್), ಸುರೇಶ್ ರೈನಾ (203 ಸಿಕ್ಸರ್) ಮತ್ತು ಡೇವಿಡ್ ವಾರ್ನರ್ (201 ಸಿಕ್ಸರ್) ಇದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಜೋಸ್ ಬಟ್ಲರ್ ತಮ್ಮ ಅಸಾಧಾರಣ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಎರಡು ಬಾರಿ ಔಟಾಗುವ ಅಪಾಯದಿಂದ ಪಾರಾದ ಬಟ್ಲರ್ ಕೊನೆಯವರೆಗೂ ನಿಂತು ಆರ್ ಸಿಬಿ ಬೌಲರ್ ಗಳ ಬೆವರಿಸಿದ್ರು . ಅಂತಿಮ ಎರಡು ಓವರ್ಗಳಲ್ಲಿ ಹೆಟ್ಮೈರ್ ಅವರೊಂದಿಗೆ ಸೇರಿ 42 ರನ್ ಬಾರಿಸಿದ ಬಟ್ಲರ್, 47 ಎಸೆತಗಳಲ್ಲಿ ಆರು ಸಿಕ್ಸರ್ಗಳೊಂದಿಗೆ ಔಟಾಗದೆ 70 ರನ್ ಗಳಿಸಿದರು. ipl-2022-jos-buttler-joins-100-sixes-club









