ಹಾರ್ದಿಕ್ ಪಾಂಡ್ಯ ಅವರಲ್ಲಿ ಕಪಿಲ್ ದೇವ್ ಕ್ವಾಲಿಟಿ..!!
ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡೆ ಅವರನ್ನು ಭಾರತ ತಂಡದ ಮಾಜಿ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್ ಶ್ಲಾಘಿಸಿದ್ದಾರೆ.
ಐಪಿಎಲ್-2022ರಲ್ಲಿ ಹೊಸ ತಂಡ ಗುಜರಾತ್ ತಂಡದ ನಾಯಕರಾಗಲಿದ್ದು, ಆ ಅನುಭವ ಹಾರ್ದಿಕ್ ವೃತ್ತಿಜೀವನಕ್ಕೆ ಸಾಕಷ್ಟು ಉಪಯೋಗಕರವಾಗಲಿದೆ ಎಂದಿದ್ದಾರೆ.
2016ರಲ್ಲಿ ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಆಯ್ಕೆಯಲ್ಲಿ ಎಂಎಸ್ ಕೆ ಪ್ರಸಾದ್ ಪಾತ್ರ ಪ್ರಮುಖವಾಗಿದೆ. ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡ ಹಾರ್ದಿಕ್, ಸ್ಟಾರ್ ಆಲ್ ರೌಂಡರ್ ಎನಿಸಿಕೊಂಡಿದ್ದಾರೆ.
ಆದರೆ, ಫಾರ್ಮ್ ಮತ್ತು ಬೌಲಿಂಗ್ ಮಾಡಲು ಸಾಧ್ಯವಾಗದ ಕಾರಣ ಹಾರ್ದಿಕ್ ಕಳೆದ ವರ್ಷದಿಂದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಟೀಂ ಇಂಡಿಯಾದಿಂದ ಹೊರ ಬಿದ್ದಿದ್ದು, ಜೊತೆಗೆ ಮುಂಬೈ ಇಂಡಿಯನ್ಸ್ ರಿಟೈನ್ಡ್ ಮಾಡಿಕೊಳ್ಳದೇ ಇದ್ದದ್ದು, ಹಾರ್ದಿಕ್ ಪಾಂಡ್ಯ ವೃತ್ತಿ ಜೀವನ ಕೊನೆಗೊಂಡಿತಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತು.
ಆದ್ರೆ ಐಪಿಎಲ್ ನ ಹೊಸ ಪ್ರಾಂಛೈಸಿ ಗುಜರಾತ್ ಟೈಟಾನ್ಸ್ ಪಾಂಡ್ಯರನ್ನ ಖರೀದಿಸಿ ತಮ್ಮ ತಂಡದ ನಾಯಕರನ್ನಾಗಿ ಮಾಡಿದೆ.
ನಾಯಕನಾಗಿ ಹಾರ್ದಿಕ್‌ಗೆ ಇದು ಮೊದಲ ಅನುಭವ. ಆದರೆ, ಆಡಿದ ಮೊದಲೆರಡು ಪಂದ್ಯಗಳಲ್ಲಿ ಹಾರ್ದಿಕ್ ತಮ್ಮ ಛಾಪು ಮೂಡಿಸಿ ತಂಡಕ್ಕೆ ಸರಣಿ ಜಯ ತಂದುಕೊಟ್ಟಿದ್ದಾರೆ.
ಲಕ್ನೋ ಮತ್ತು ಡೆಲ್ಲಿ ವಿರುದ್ಧ ಗೆಲುವಿನೊಂದಿಗೆ ಅವರು ಶುಭಾರಂಭ ಮಾಡಿದ್ದಾರೆ. ದೆಹಲಿ ವಿರುದ್ಧದ ಪಂದ್ಯದಲ್ಲಿ 31 ರನ್ ಮತ್ತು ಲಕ್ನೋ ವಿರುದ್ಧ 33 ರನ್ ಗಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹಾರ್ಧಿಕ್ ಪ್ರದರ್ಶನದ ಮಾತನಾಡಿರುವ ಎಂಎಸ್ ಕೆ ಪ್ರಸಾದ್, ಪಾಂಡ್ಯ ಚೆನ್ನಾಗಿ ಆಡಿದರೆ … ನನಗೆ ಅದರ ಬಗ್ಗೆ ಹೆಮ್ಮೆ ಇರುತ್ತೆ.
ನನ್ನ ಸ್ವಂತ ಮಗನದ್ದೇ ಆ ಗೆಲುವು ಎಂಬಂತೆ ನಾನು ಸಂತೋಷ ಪಡುತ್ತೇನೆ. ಲೆಜೆಂಡರಿ ಆಲ್‌ರೌಂಡರ್ ಕಪಿಲ್ ದೇವ್ ಅವರ ಪರಂಪರೆಯನ್ನು ಮುಂದುವರಿಸಬಲ್ಲ ಆಲ್‌ರೌಂಡ್ ಅನ್ನ ಹುಡುಕುವುದು ತುಂಬಾ ಕಷ್ಟ.
ಆದ್ರೆ ಪಾಂಡ್ಯರಲ್ಲಿ ನಾನು ಆ ಗುಣಗಳನ್ನು ನೋಡಿದ್ದೇನೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್.. ಹೀಗೆ ಎಲ್ಲ ವಿಭಾಗಗಳಲ್ಲೂ ಅವರು ಸ್ಟ್ರಾಂಗ್ ಆಗಿದ್ದಾರೆ ಎಂದಿದ್ದಾರೆ ಎಂಎಸ್ ಕೆ ಪ್ರಸಾದ್. msk-prasad talking about hardik pandya captaincy









