ವಿಜಯ್ ಬೀಸ್ಟ್ ಚಿತ್ರಕ್ಕೆ ಕುವೈತ್ ನಲ್ಲಿ ನಿಷೇಧ – ಕಾರಣ ಗೊತ್ತಾ ?
ನಟ ದಳಪತಿ ವಿಜಯ್ ತಮ್ಮ ಮುಂದಿನ ಚಿತ್ರ ಬೀಸ್ಟ್ (ಹಿಂದಿಯಲ್ಲಿ ರಾ) ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಿರುವಾಗ ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೇ ಚಿತ್ರ ಬಿಡುಗಡೆಗೂ ಕಹಿ ಸುದ್ದಿಯೊಂದ ಎದುರಾಗಿದೆ. ದಳಪತಿ ವಿಜಯ್ ಮತ್ತು ಪೂಜಾ ಹೆಗಡೆ ಅಭಿನಯದ ಚಿತ್ರ ಬಿಡುಗಡೆಗೆ ಮುನ್ನ ಕೊಂಚ ಹಿನ್ನಡೆ ಅನುಭವಿಸಿದೆ.
ಇತ್ತೀಚೆಗಷ್ಟೇ ಬಹಿರಂಗವಾಗಿರುವ ಮಾಹಿತಿ ಪ್ರಕಾರ ಕುವೈತ್ ನಲ್ಲಿ ಈ ಚಿತ್ರದ ಬಿಡುಗಡೆಗೆ ನಿಷೇಧ ಹೇರಲಾಗಿದೆ. ಚಿತ್ರದಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯ ದೃಶ್ಯಗಳನ್ನು ತೋರಿಸಲಾಗಿದೆ, ಇದು ಕುವೈತ್ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಈ ಚಿತ್ರವನ್ನು ನಿಷೇಧಿಸಲು ನಿರ್ಧರಿಸಿದೆ.
ಚಿತ್ರಕ್ಕೆ ನಿಷೇಧ ಹೇರಿದರೆ ಅದರ ಗಳಿಕೆಯ ಮೇಲೆ ಒಂದಿಷ್ಟು ಪರಿಣಾಮ ಬೀರಬಹುದು. ಚಿತ್ರ ನಿಷೇಧಕ್ಕೆ ಭಯೋತ್ಪಾದನೆಯೇ ಕಾರಣ ಎಂದು ಹೇಳಲಾಗುತ್ತಿದೆ.
ಚಿತ್ರದ ಕಥೆಯ ಕುರಿತು ಮಾತನಾಡುವುದಾದರೆ, ನಟ ವಿಜಯ್ ಬೀಸ್ಟ್ನಲ್ಲಿ ವಿಜಯವೀರ ರಾಘವನ್ ಎಂಬ ರಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೆಲ್ಸನ್ ಅವರ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿ ಈ ಚಿತ್ರವು ಆಕ್ಷನ್ ಮತ್ತು ಕಾಮಿಡಿಯಿಂದ ತುಂಬಿದೆ. ಇದರಲ್ಲಿ ಮೂರು ಹಾಡುಗಳಿದ್ದು, ಅದರಲ್ಲಿ ಎರಡು ಹಾಡುಗಳು ಅರ್ಬಿ ಕುತ್ತು ಮತ್ತು ಜಾಲಿ ಓ ಜಿಮ್ಖಾನಾ ಬಿಡುಗಡೆಯಾಗಿದೆ. ಮತ್ತು ಮೂರನೇ ಹಾಡು ಕಥೆಯ ಭಾಗವಾಗಲಿದೆ. ಚಿತ್ರವು ಏಪ್ರಿಲ್ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಬೀಸ್ಟ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಚಿತ್ರದಲ್ಲಿ ದಳಪತಿ ವಿಜಯ್, ಪೂಜಾ ಹೆಗ್ಡೆ ಮತ್ತು ಸೆಲ್ವರಾಘವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೆ, ಶೈನ್ ಟಾಮ್ ಚಾಕೊ, ಯೋಗಿ ಬಾಬು, ರಾಡಿನ್ ಕಿಂಗ್ಸ್ಲಿ ಮತ್ತು ಜಾನ್ ವಿಜಯ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.








