ಭಾರತದ ಮೊದಲ ನೀರೊಳಗೆ ಮಟ್ರೋ ಸುರಂಗ ಮಾರ್ಗ
ನವದೆಹಲಿ: ಭಾರತದ ಮೊದಲ ನೀರೊಳಗಿನ ಮಟ್ರೋ ಸುರಂಗ ಮಾರ್ಗ ಕಾಮಗಾರಿ ಪ್ರಾರಂಭವಾಗಿದ್ದು, 2023ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
ಹೌರಾ ಮತ್ತು ಕೋಲ್ಕತ್ತಾ ನಡುವೆ ಮೆಟ್ರೋ ಸಂಪರ್ಕವನ್ನು ಕಲ್ಪಿಸಲು ಹೂಗ್ಲಿ ನದಿಯ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. 2023ರ ವೇಳೆಗೆ ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಸುತ್ತದೆ.
ಈ ಸುರಂಗ ಮಾರ್ಗವು 16.6 ಕಿಮೀ ಉದ್ದವಾಗಿದ್ದು, ಪೂರ್ವ-ಪಶ್ಚಿಮ ವಿಸ್ತರಣೆಯಲ್ಲಿ ನಿರ್ಮಾರಣವಾಗುತ್ತಿದ್ದು, ನದಿಯ 520 ಮೀಟರ್‌ಗಳು ಆಳದಲ್ಲಿ ಸಿದ್ದವಾಗುತ್ತಿದೆ. ಇನ್ನೂ ಈ ಸುರಂಗ ಕಾರಿಡಾರ್ ಅನ್ನು ನದಿಯ ತಳದಿಂದ 33 ಮೀಟರ್ ಕೆಳಗೆ ನಿರ್ಮಿಸಲಾಗಿದೆ.
ಈ ಕೋಲ್ಕತ್ತಾ ಪೂರ್ವ-ಪಶ್ಚಿಮ ಮೆಟ್ರೋ ಮಾರ್ಗವನ್ನು ಕೋಲ್ಕತ್ತಾ ಮೆಟ್ರೋ ರೈಲು ಕಾರ್ಪೊರೇಷನ್ (KMRCL) ನಿರ್ಮಿಸುತ್ತಿದೆ. ಯೋಜನೆಯಲ್ಲಿ ಒದಗಿಸಲಾಗುತ್ತಿರುವ ಸೌಲಭ್ಯಗಳು ಮತ್ತು ಸುರಕ್ಷತಾ ಕ್ರಮಗಳ ಕುರಿತು ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಯೋಜನೆ ಮೇಲ್ವಿಚಾರಕ ಮಿಥುನ್ ಘೋಷ್, ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರನ್ನು ಸ್ಥಳಾಂತರಿಸಲು ಸುರಂಗಗಳಲ್ಲಿ ವಾಕ್‌ವೇಗಳಿವೆ ಎಂದು ಹೇಳಿದರು.
ಅಲ್ಲದೇ ನೀರಿನ ಸುರಂಗದ ಪ್ರದೇಶದಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ವಿಶೇಷ ಮಾರ್ಗದ ಮೂಲಕ ಪ್ರಯಾಣಿಕರನ್ನು ಹೊರಕ್ಕೆ ಕರೆದೊಯ್ಯಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಪ್ಯಾಸೇಜ್ ಕಾಮಗಾರಿಯನ್ನೂ ಮಾಡಲಾಗಿದೆ ಎಂದು ಮಿಥುನ್ ತಿಳಿಸಿದರು.








